Sunday, July 6, 2025

Latest Posts

ಶೂಸ್ ಹಾಕುವಾಗ ಹುಷಾರು..! ಹಾವಿರಬಹುದು ಎಚ್ಚರ..!: Viral Video

- Advertisement -

News: ಮಳೆಗಾಲದಲ್ಲಿ ಸರಿಸೃಪಗಳು ಮನೆಯೊಳಗೆ ಬರುವ ಸಂಭವವಿರುತ್ತದೆ. ಕೆಲವೊಮ್ಮೆ ಮಳೆಯ ನೀರಿಗೆ ಹರಿದು ಬರುವ ಇವುಗಳು, ಯಾವಾಗ ಮನೆ ಸೇರುತ್ತೆ ಅಂತ ಹೇಳಲು ಬರುವುದಿಲ್ಲ.

ಮನೆಯಲ್ಲಿರುವ ಕೆಲ ಜಾಗಗಳಲ್ಲಿ ಚೇಳು, ಹಾವು, ಏಡಿ ಇವೆಲ್ಲವೂ ಪ್ರತ್ಯಕ್ಷವಾಗಿ, ಸಣ್ಣ ಹಾರ್ಟ್ ಅಟ್ಯಾಕ್ ತರೋದಂತೂ ಸತ್ಯ. ಅದೇ ರೀತಿ ಕರ್ನಾಟಕದ ಊರೊಂದರಲ್ಲಿ ಇದೇ ರೀತಿ, ಯುವತಿಯ ಮೆಟ್ಟಿನೊಳಗೆ ಹಾವು ಹೋಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಾಲೇಜಿಗೆ ಹೋಗುತ್ತಿದ್ದ ಯುವತಿ ತನ್ನ ಶೂಸ್ ಹಾಕಿಕೊಳ್ಳಲು ಮುಂದಾಗಿದ್ದಾಳೆ. ಆಗ ಶೂಸ್‌ನಲ್ಲಿ ಸರ್ಪ ಕಾಣಿಸಿಕೊಂಡಿದೆ. ಇದನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಶೂಸ್ ಹಾಕುವಾಗ, ಹುಷಾರಾಗಿರಿ. ಒಮ್ಮೆ ಶೂಸ್ ಚೆಕ್ ಮಾಡಿ, ಏನಾದರೂ ಇದೆಯಾ ಎಂದು ಪರೀಕ್ಷಿಸಿ, ಬಳಿಕ ಧರಿಸಿ ಎಂದಿದ್ದಾರೆ.

- Advertisement -

Latest Posts

Don't Miss