- Advertisement -
Web Story: ನಾವು ನಮ್ಮ ಜೀವನದಲ್ಲಿ ಕೆಲವು ನಡುವಳಿಕೆಗಳನ್ನು ತಿಳಿದಿರಬೇಕು. ಇಲ್ಲವಾದಲ್ಲಿ ನಮಗೆ ಗೌರವ ಸಿಗುವುದಿಲ್ಲ. ಕೆಲ ಘಟನೆಗಳು ನಮಗೆ ಹೇಗಿರಬೇಕು ಎಂದು ಕಲಿಸುತ್ತದೆ. ಅವಮಾನವಾದ ಬಳಿಕ ನಾವು ಹಾಗೆ ಮಾಡಬಾರದಿತ್ತು ಅಂತಾ ಅನ್ನಿಸುತ್ತದೆ. ಆದರೆ ಕೆಲ ವಿಚಾರಗಳನ್ನು ಮುಂಚೆಯೇ ತಿಳಿದಿದ್ದರೆ, ನಮ್ಮ ಗೌರವವೂ ಉಳಿಯುತ್ತದೆ. ಹಾಗಾದ್ರೆ ಯಾವ 5 ನಡುವಳಿಕೆಗಳು ನಮಗೆ ತಿಳಿದಿರಲೇಬೇಕು ಅಂತಾ ತಿಳಿಯೋಣ ಬನ್ನಿ..
- ನೀವು ಸ್ಪೀಕರ್‌ನಲ್ಲಿರಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದರೆ, ನೀವು ಯಾರ ಬಳಿ ಮಾತನಾಡುತ್ತಿದ್ದೀರೋ, ಅವರ ಬಳಿ, ನಾನು ಫೋನನ್ನು ಸ್ಪೀಕರ್‌ನಲ್ಲಿ ಹಾಕಿದ್ದೇನೆ. ಮಾತನಾಡುವಾಗ ಮಾತಿನ ಮೇಲೆ ಗಮನವಿರಲಿ ಎಂದು ಹೇಳಬೇಕು.
- ಲಿಫ್ಟ್ ನಲ್ಲಿ ಹೋಗುವಾಗ, ಲಿಫ್ಟ್‌ನಲ್ಲಿ ಇರುವವರು ಆಚೆ ಬರುವವರೆಗೂ ಕಾದು, ಬಳಿಕ ನೀವು ಒಳಗೆ ಹೋಗಬೇಕು.
- ನಿಮ್ಮ ಬಳಿ ಯಾರಾದರೂ ಈ ಫೋಟೋ ನೋಡಿ ಎಂದು ತಮ್ಮ ಸೆಲ್ ಫೋನ್ ನೀಡಿದ್ದಲ್ಲಿ, ಬರೀ ಫೋಟೋವನ್ನು ನೋಡಿ, ಅವರಿಗೆ ಅವರ ಸೆಲ್ ಫೋನ್ ಮರಳಿ ನೀಡಿ. ಅದನ್ನು ಬಿಟ್ಟು ಸ್ವೈಪ್ ಮಾಡಬೇಡಿ.
- ಕುಳಿತೇ ಕೈ ಕುಲುಕಬೇಡಿ. ಹ್ಯಾಂಡ್ ಶೇಕ್ ಮಾಡುವ ಸಂದರ್ಭ ಬಂದಾಗ, ಎದ್ದು ನಿಂತು ಹ್ಯಾಂಡ್‌ಶೇಕ್ ಮಾಡುವುದು ಉತ್ತಮ ನಡುವಳಿಕೆ.
- ನೀವು ರೆಸ್ಟೋರೆಂಟ್ಗೆ ಹೋದಾಗ, ಬೇರೆಯವರು ಆರ್ಡರ್ ಮಾಡಿರುವ ಆಹಾರ ನೀವು ತಿನ್ನುತ್ತಿದ್ದರೆ, ಲಾಸ್ಟಿನಲ್ಲಿ ಉಳಿದ ಆಹಾರವನ್ನು ನೀವು ಮುಗಿಸಬೇಡಿ.
- Advertisement -