Beauty Tips: ಹಾಲಿನ ಸೇವನೆಯಿಂದ ನಮ್ಮ ದೇಹದ ಆರೋಗ್ಯ ಅಭಿವೃದ್ಧಿ ಆಗುತ್ತದೆ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇದರ ಜತೆ ನಿಮ್ಮ ಮುಖದ ಚಂದ ಕೂಡ ಹೆಚ್ಚಿಸಬಹುದು. ಹಾಗಾದ್ರೆ ಹಾಲನ್ನ ಯಾವ ರೀತಿ ಬಳಸುವುದರಿಂದ ನಿಮ್ಮ ಮುಖದ ಅಂದ ಹೆಚ್ಚಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಹಸಿ ಹಾಲನ್ನು ಶ್ರೀಗಂಧದ ಪೇಸ್ಟ್ ಜತೆ ಮಿಕ್ಸ್ ಮಾಡಿ, ಫೇಸ್‌ಪ್ಯಾಕ್ ಹಾಕಬೇಕು. 15 ನಿಮಿಷದ ಬಳಿಕ ಮುಖವನ್ನು ಕ್ಲೀನ್ ಮಾಡಬೇಕು. ಇದರಿಂದ ನಿಮ್ಮ ತರ್ಮದ ಕಾಂತಿ ಹೆಚ್ಚುತ್ತದೆ. ತೇವ ಉಳಿಯುತ್ತದೆ.
ನಿಮ್ಮದು ಎಣ್ಣೆ ಚರ್ಮವಾಗಿದ್ದಲ್ಲಿ, ನಿಮ್ಮ ತ್ವಚೆಗೆ ಹಸುವಿನ ಹಸಿ ಹಾಲನ್ನು ಹಚ್ಚಿ ಮಸಾಜ್ ಮಾಡಿ. ಇದರಿಂದ ಎಣ್ಣೆ ತ್ವಚೆ ಮಾಯವಾಗಿ, ನಿಮ್ಮ ತ್ವಚೆಗೆ ನ್ಯಾಚುರಲ್ ಮಾಯಿಶ್ಚರೈಸ್ ಸಿಗುತ್ತದೆ.
ಮುಖದ ಮೇಲೆ ಗುಳ್ಳೆ, ಕಲೆ ಇದ್ದರೆ, ಹಸಿ ಹಾಲಿನಿಂದ ಮಸಾಜ್ ಮಾಡಿದರೆ, ಕಲೆ ಮಾಯವಾಗುತ್ತದೆ. ಮುಖವೂ ಕ್ಲೀನ್ ಆಗುತ್ತದೆ. ಅಲ್ಲದೇ ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಇನ್ನು ಮುಖಕ್ಕೆ ಹಚ್ಚುವುದಕ್ಕೆ ಮಾತ್ರ ಹಸಿ ಹಾಲು ಉತ್ತಮ. ಸೇವನೆ ಮಾಡಬೇಕು ಎಂದರೆ ನೀವು ಕಾಯಿಸಿದ ಹಾಲನ್ನೇ ಬಳಸಬೇಕು. ಏಕೆಂದರೆ ಹಸಿ ಹಾಲಿನ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಹಾಲು ಕಾಯಿಸಿದಾಾಗ ಈ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಬಳಿಕ ಆ ಹಾಲು ಸೇವನೆಗೆ ಉತ್ತಮವಾಗಿರುತ್ತದೆ.