Beauty Tips: ಕೆಲವರ ಸ್ಕಿನ್ ಮೇಲೆ ಕಲೆಗಳಿರುತ್ತದೆ. ಇದನ್ನು ಮಂಗು ಅಥವಾ ಬಂಗು ಅಂತಾ ಕರೆಯಲಾಗುತ್ತದೆ. ಮಕ್ಕಳಾಗದಂತೆ ಮಾತ್ರೆ ಸೇವಿಸಿದ್ದಲ್ಲಿ, ಇಂಥ ಸಮಸ್ಯೆ ಆಗಬಹುದು ಅಂತಾರೆ ವೈದ್ಯರು.
ಅಥವಾ ಗರ್ಭಾವಸ್ಥೆಯಲ್ಲಿದ್ದಾಗ, ಹಾರ್ಮೋನಲ್ ಇಂಬ್ಯಾಲೆನ್ಸ್ ಆಗಿದ್ದಾಗ ಈ ರೀತಿ ಸ್ಕಿನ್ ಸಮಸ್ಯೆ ಬರಬಹುದು. ಅನುವಂಶಿಕವಾಗಿಯೂ ಈ ಸಮಸ್ಯೆ ಕಾಣಿಸಬಹುದು. ಮಂಗು ಅಥವಾ ಬಂಗು ಇರುವವರು ಹೆಚ್ಚು ಬಿಸಿಲಿಗೆ ಹೋಗಬಾರದು. ಏಕೆಂದರೆ, ಬಿಸಿಲಿಗೆ ಹೋದಲ್ಲಿ ಈ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆದಷ್ಟು ಬಿಸಲಿಗೆ ಹೋಗದೇ, ನಿಮ್ಮ ಚರ್ಮವನ್ನು ರಕ್ಷಿಸುವುದು ಉತ್ತಮ.
ಸನ್‌ಸ್ಕ್ರೀನ್ ಬಳಸಿದ್ದಲ್ಲಿ, ಈ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತ ಬರುತ್ತದೆ. ಇದರ ಜತೆ ನೀವು ವೈದ್ಯರ ಬಳಿ ಹೋಗಿ, ಇದಕ್ಕೆ ಪರಿಹಾರ ಪಡೆಯಬಹುದು. ವೈದ್ಯರು ನಿಮ್ಮ ಸ್ಕಿನ್ ಪ್ರಾಬ್ಲಮ್ ನೋಡಿ, ಅದಕ್ಕೆ ಬೇಕಾದ ಮಾತ್ರೆ, ಕ್ರೀಮ್ ಎಲ್ಲವೂ ನೀಡುತ್ತಾರೆ. ಈ ಚಿಕಿತ್ಸೆ ಬಗ್ಗೆ ತಿಳಿಯಲು ವೀಡಿಯೋ ನೋಡಿ.




