ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಯೊಂದು ವಾರ್ಡ್ಗಳಲ್ಲಿಯೂ ಕೊರೋನಾ ಲಗ್ಗೆ ಇಟ್ಟಿದ್ದು, ಕ್ಷಣ ಕ್ಷಣಕ್ಕೂ ವಾರ್ಡ್ ಮಟ್ಟದಲ್ಲಿ ಕೊರೋನಾ ಕೇಸ್ ದುಪ್ಪಟ್ಟಾಗುತ್ತಿವೆ. 198 ವಾರ್ಡ್ ಗಳ ಪೈಕಿ ಕೇವಲ ಒಂದು ವಾರ್ಡ್ ಮಾತ್ರ ಸೇಫ್ ಆಗಿದ್ದು, ಉಳಿದಂತೆ 197 ವಾರ್ಡ್ಗಳಲ್ಲಿ ಕನಿಷ್ಠ 40 ಕೊರೋನಾ ಪಾಸಿಟಿವ್ ಇದೆ.
ಈಗಾಗಲೇ 198 ವಾರ್ಡ್ ಗಳ ಪೈಕಿ 197 ವಾರ್ಡ್ ಗಳು ಡೇಜರ್ ಝೋನ್ ಆಗಿದೆ. ಬೆಂಗಳೂರಿನ 41 ವಾರ್ಡ್ ಗಳಲ್ಲಿ 100ಕ್ಕೂ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಆತಂಕಕ್ಕೀಡು ಮಾಡಿದೆ.
33 ವಾರ್ಡ್ಗಳಲ್ಲಿ 80 ರಿಂದ 100 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 46 ವಾರ್ಡ್ ಗಳು , 60 + ಅಂದ್ರೆ 60 ರಿಂದ 80 ಸೋಂಕಿತರನ್ನು ಹೊಂದಿವೆ. 57 ವಾರ್ಡ್ ಗಳಲ್ಲಿ 40 ರಿಂದ 50 ಜನ ಸೋಂಕಿತರು ಇದ್ದಾರೆ. 20 ವಾರ್ಡ್ ಗಳಲ್ಲಿ 30 ರಿಂದ 40 ಸೋಂಕಿತರು ಇದ್ದಾರೆ. ವಾಡ್೯ ನಂಬರ್ 16 ದಾಸರಹಳ್ಳಿ ಬಿಟ್ಟು ಇನ್ನುಳಿದ 197 ವಾಡ್೯ ಗಳೂ ಸದ್ಯ ಡೇಂಜರ್ ಝೋನ್ನಲ್ಲಿದೆ.
ಇನ್ನೊಂದೆಡೆ ಕೊರೊನಾ ರೋಗಿಗಳಿಗೆ ಬೆಡ ಸಮಸ್ಯೆ ಮುಂದುವರೆದಿದೆ. ಬೆಂಗಳೂರು ಹೊರವಲಯದ ಬಿಐಇಸಿಯಲ್ಲಿ 10,100 ಬೆಡ್ ಬರೀ ಸುಳ್ಳು. ಮಾದಾವಾರದಲ್ಲಿ ಈವರೆಗೂ ಬೆಡ್ಗಳು ಸಿದ್ಧವಾಗಿಲ್ಲ. ಈವರೆಗೂ ಕೇವಲ 5 ಸಾವಿರ ಬೆಡ್ ಮಾತ್ರವೇ ಸಿದ್ದವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಕೇವಲ ಒಂದು ಸಾವಿರ ಬೆಡ್ ಮಾತ್ರವೇ ಲಭ್ಯವಿದೆ.
ಈ ಕಾರಣಕ್ಕೆ 10,100 ಬೆಡ್ ಸಿದ್ದವಾಗೋದು ಯಾವಾಗ.? ಕೊರೋನಾ ರೋಗಿಗಳಿಗೆ ಬೆಡ್ ಲಭ್ಯವಾಗೋದು ಯಾವಾಗ.? ಇಷ್ಟು ದಿನ ಸರ್ಕಾರ ನೀಡಿದ 10,100 ಬೆಡ್ ಕೇವಲ ಲೆಕ್ಕಕ್ಕೆ ಮಾತ್ರನಾ..? ಎಂಬ ಹತ್ತು ಹಲವು ಪ್ರಶ್ನೆ ಉದ್ಭವಿಸಿದೆ. ಸ್ವತಃ ಬಿಬಿಎಂಪಿ ಆಯುಕ್ತರೇ ಟ್ವೀಟ್ ಮಾಡಿದ್ದಾರೆ.
ನಾಗೇಂದ್ರ, ಕರ್ನಾಟಕ ಟಿವಿ, ಬೆಂಗಳೂರು

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




