ಕೋತಿಗಳನ್ನು ಕೊಂದು ಮರಕ್ಕೆ ನೇಣು ಹಾಕಿದ ನೀಚರು..!

Beedar News:

ಬೀದರ್ ನಲ್ಲಿ ದುಷ್ಕರ್ಮಿಗಳು ಕೋತಿಗಳನ್ನು ಕೊಂದು ನೇಣು ಹಾಕಿದ್ದಾರೆ. ಬೀದರ್‌ನ ಭಾಲ್ಕಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎಂದು  ತಿಳಿದು ಬಂದಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರವೊಂದಕ್ಕೆ ಯಾರೋ ಪಾಪಿಗಳು ನಾಲ್ಕು ಕೋಡಂಗಿಗಳನ್ನು ಹೊಡೆದು ನೇಣು ಹಾಕಿದ ಅಮಾನವೀಯ  ಘಟನೆ ನಡೆದಿದೆ. ನಾಲ್ಕು ಮಂಗಗಳಲ್ಲಿ ಎರಡು ಮೃತಪಟ್ಟರೆ, ಮತ್ತೆರಡರನ್ನು ಸ್ಥಳೀಯ ಯುವಕರು  ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಯಾರೋ ಪಾಪಿಗಳು ನಸುಕಿನ ಜಾವದಲ್ಲಿ ಈ ಕೃತ್ಯವೆಸಗಿದ್ದಾರೆ. ಈ ಪೈಕಿ ಎರಡು ಕೋತಿಗಳು ಬಚಾವಾಗಿದು ಎರಡು ಕೋತಿಗಳು ಬಲಿಯಾಗಿವೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದುಷ್ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

“ಸಿದ್ದರಾಮಯ್ಯ ದೇಶದ ಜನತೆಯನ್ನು ಕ್ಷಮೆ ಕೇಳಬೇಕು” : ಪ್ರತಾಪ್ ಸಿಂಹ

“ರಾಜಕೀಯ ತೆವಳಿಗೆ ಹೇಳಿಕೆ ಕೊಡಬೇಡಿ” : ಸಿ. ಟಿ.ರವಿ

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯ : ಮಗನ ಅಂಗಾಂಗ ದಾನ ಮಾಡಿದ ಪೋಷಕರು

About The Author