Sunday, May 26, 2024

Latest Posts

ನೇಹಾ ಪ್ರಕರಣ ಮಾಸುವ ಮುನ್ನ ಮತ್ತೊಂದು ಕೇಸ್: ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿರುವ ಅನ್ಯಕೋಮಿನ ಯುವಕ

- Advertisement -

Hubli News: ಹುಬ್ಬಳ್ಳಿ: ನೇಹಾ ಕೊಲೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಪ್ರಾಪ್ತೆಯನ್ನು ಅನ್ಯಕೋಮಿನ ಯುವಕ ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದಾನೆ.

ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ, ಆಕೆಯ ತಾಯಿ ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಆಕೆ ಗರ್ಭಿಣಿ ಎಂದು ಹೇಳಿದ್ದು ಕೇಳಿ, ಆಕೆಯ ತಂದೆ ತಾಯಿಗೆ ಶಾಕ್ ಆಗಿದೆ. ಸದ್ಯ ಅಪ್ರಾಪ್ತೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯುವಕನ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಠಾಣೆಯಲ್ಲಿ ಇನ್ನುವರೆಗೂ ಎಫ್‌ಐಆರ್ ಹಾಕದ ಕಾರಣ, ಯುವಕನನ್ನು ಬೇಗ ಬಂಧಿಸುವಂತೆ ಆಗ್ರಹಿಸಿ, ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿ ಠಾಣೆ ಎದುರು, ಹಿಂದೂ ಪರ ಸಂಘಟನೆಗಳು, ಆರೋಪಿ ಬಂಧನಕ್ಕೆ ಆಗ್ರಹಿಸಿ, ಪ್ರತಿಭಟನೆ ನಡೆಸಿದೆ. ಡಿಸಿಪಿ ರಾಜೀವ್ ಜೊತೆ ಸಂಘಟನೆಯ ಕಾರ್ಯಕರ್ತರು ವಾಗ್ವಾದ ನಡೆಸಿದ್ದು, ಆರೋಪಿಯನ್ನು ಈಗಾಗಲೇ ಅರೆಸ್ಟ್ ಮಾಡಿದ್ದೇವೆ ಎಂದು ಪೊಲೀಸರು ಹೇಳಿದರೂ ಕೂಡ, ಪ್ರತಿಭಟನಾಕಾರರು ಸಮಾಧಾನಗೊಳ್ಳುತ್ತಿಲ್ಲ.

ಇನ್ನು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಹುಬ್ಬಳ್ಳಿ-ಧಾರವಾಡ ಕಮಿಷನರ್ ರೇಣುಕಾ ಸುಕುಮಾರನ್,  ಈಗಾಗಲೇ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಎಸ್ಟಿ ಸಮಾಜದ ಅಪ್ರಾಪ್ತ ಬಾಲಕಿಯನ್ನು ಮುಸ್ಲಿಂ ಯುವಕ ಗರ್ಭಿಣಿ ಮಾಡಿದ್ದಾನೆ. ಈ‌ ಕುರಿತು ನವನಗರ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಸದ್ಧಾಂ ಹುಸೇನ್‌ನ್ನು ಬಂಧನ ಮಾಡಲಾಗಿದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತೆ. ಅಟ್ರಾಸಿಟಿ ಕೇಸ್ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಎಸ್ಟಿ ಸಮಾಜದವರು ಆರೋಪಿ ಬಂಧನಕ್ಕೆ ಅಗ್ರಹಿಸಿ ಪ್ರೊಟೆಸ್ಟ ಮಾಡುತ್ತಿದ್ದಾರೆ. ಈಗ ಅವರಿಗೆ ಆರೋಪಿ ಬಂಧನ ವಿಷಯ ತಿಳಿಸಿ ಮನವೊಲಿಸಲಾಗುವುದು ಎಂದು ರೇಣುಕಾ ಹೇಳಿದ್ದಾರೆ.

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

- Advertisement -

Latest Posts

Don't Miss