Wednesday, May 29, 2024

Latest Posts

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

- Advertisement -

Political News: ನಾನು ಗೆದ್ದರೆ, ರೈತರಿಗೆ ನೀರು ತಂದು ಕೊಡುತ್ತೇವೆ ಎಂದು ರಾಜುಗೌಡ ಭರವಸೆ ನೀಡಿದ್ದಾರೆ. ಸುರಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜುಗೌಡ, ನನ್ನನ್ನು ಗೆಲ್ಲಿಸಿದರೆ, ಗುದ್ದಿ ನೀರು ತಂದುಕೊಡುತ್ತೇನೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಸಚಿವರಾಗಿದ್ದಾಗಲೇ, ಕ್ಷೇತ್ರಕ್ಕೆ ನೀರು ಬಿಡಿಸಿದ್ದೇನೆ. ಡಿಕೆಶಿಯವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ, ಅವರು ಯಾವಾಗಲೂ ರೈತರ ಪರವಾಗಿಯೇ ಮಾತನಾಡಬೇಕು. ರೈತರ ವಿರುದ್ಧ ಮಾತನಾಡಿದರೆ, ನಾವು ಹೆದರುವವರಲ್ಲ. ಅಣೆಕಟ್ಟೆಯಲ್ಲಿ 60 ಟಿಎಂಸಿ ನೀರು ಿದ್ದಾಗಲೇ, ರೈತರಿಗೆ ನೀರು ಬಿಡಬಹುದಿತ್ತು. ಆದರೆ ನೀವು ರೈತರಿಗೆ ನೀರು ಬಿಡಲಿಲ್ಲ. ನಿಮ್ಮದು ರೈತರ ಪರ ಸರ್ಕಾರವೇ ಎಂದು ರಾಾಜುಗೌಡ ಪ್ರಶ್ನಿಸಿದ್ದಾರೆ.

ಈ ಭಾಗದ ಜನರು ದಡ್ಡರಲ್ಲ. ಮುಂದಿನ ಚುನಾವಣೆಯಲ್ಲಿ ನೀರು ಹೇಗೆ ತರಬೇಕು ಎಂಬುದನ್ನ ಇವರು ಅರಿತಿದ್ದಾರೆ. ಸುರಪುರ ಕ್ಷೇತ್ರಕ್ಕೆ 3 ಕೋಟಿಗೂ ಅಧಿಕ ಅನುದಾನ ತಂದು, ಅಭಿವೃದ್ಧಿ ಮಾಡಿದ್ದೇನೆ. ರಸ್ತೆ, ನೀರು ಸೇರಿ ಹಲವು ಅಭಿವೃ್ದಧಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಬಿವೃದ್ಧಿ ಮಾಡಲು ಅನುವು ಮಾಡಿಕೊಡಬೇಕು. ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ರಾಜುಗೌಡ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ

ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಜಾರಿ: ವಿನೋದ ಅಸೂಟಿ

ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

- Advertisement -

Latest Posts

Don't Miss