Friday, March 14, 2025

Latest Posts

ಕೊರಗಜ್ಜನ ಕೋಲದ ಹಿನ್ನಲೆ ಅಮಿತ್ ಷಾ ರೋಡ್ ಶೋ ರದ್ದು

- Advertisement -

Political news

ಬೆಂಗಳೂರು(ಫೆ.9): ಮಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನಡೆಸಲಿರುವ ರೋಡ್ ಷೋ ಕೊರಗಜ್ಜನ ಕೋಲದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೋಲ ನಿಗದಿಯಾಗಿತ್ತು. ಹೀಗಾಗಿ ಭದ್ರತೆ ದೃಷ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದುಗೊಳಿಸಲಾಗಿದ್ದು, ಈಗಾಗಲೇ ಹಲವಾರು ಸಿದ್ಧತೆಗಳನ್ನು ಮಾಡಲಾಗಿದೆ.ಈ ಕುರಿತು ಮಂಗಳೂರು ಏರ್ ಪೋರ್ಟ್ ಬಳಿಯೇ ಸಭೆ ನಡೆಸಲುಬಿಜೆಪಿ ನಿರ್ಧರಿಸಿದೆ.

ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಪಕ್ಷದ ಸಭೆಯೂ ಸ್ಥಳಾಂತರಗೊಂಡಿದೆ. ಮಂಗಳೂರು ಏರ್ ಪೋರ್ಟ್ ಬಳಿಯೇ ಬಿಜೆಪಿ ಪಕ್ಷದ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಕೊರಗಜ್ಜ ದೈವದ ಕೋಲಕ್ಕೆ ಸಮಸ್ಯೆಯಾಗಬಾರದೆಂದು ರೋಡ್ ಶೋ ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

- Advertisement -

Latest Posts

Don't Miss