Tuesday, April 29, 2025

Latest Posts

Belagavi: ಎಎಸ್‌ಪಿಗೆ ಏಕವಚನದಲ್ಲಿ ಬೈದು ಹೊಡೆಯಲು ಕೈ ಎತ್ತಿದ ಸಿಎಂ ಸಿದ್ದರಾಮಯ್ಯ

- Advertisement -

Belagavi News: ಬೆಳಗಾವಿಯಲ್ಲಿ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ವತಿಯಿಂದ ಪ್ರತಿಭ”ನೆ ಹಮ್ಮಿಕೋಳ್ಳಲಾಗಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಲ ಮಹಿಳೆಯರು ಧಿಕ್ಕಾರ ಕೂಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಆಕ್ರೋಶ ಹೆಚ್ಚಾಗಲು ಕಾರಣವಾಗಿದೆ. ಈ ವೇಳೆ ಯಾವನೋ ಅವ್ನು ಎಎಸ್ಪಿ..? ಬಾರಯ್ಯಾ ಇಲ್ಲಿ ಅಂತಾ ಹೇಳಿ, ಬೈದು ಬಡಿಯಲು ಕೈ ಎತ್ತಿದ್ದರು.

ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಹಲವರು ಕಿಡಿಕಾರಿದ್ದಾರೆ. ಪಹಲ್ಗಾಮ್ ದಾಳಿ ನಡೆದ ಬಳಿಕ, ಪಾಕಿಸ್ತಾನದ ಜತೆ ಯುದ್ಧ ಮಾಡುವುದು ಬೇಡ ಎಂದಿದ್ದ ಸಿಎಂ ಹೇಳಿಕೆಗೆ, ಹಲವರು ಅಸಮಾಧಾನ ಹರಹಾಕಿದ್ದರು. ಇದೀಗ ಬೆಳಗಾವಿಯಲ್ಲಿ ಈ ರೀತಿ ಮಾಡಿರುವುದು, ಜನರ ಅಸಮಾಧಾನ ಹೆಚ್ಚಲು ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ವೀಡಿಯೋ ಅಪ್ಲೋಡ್ ಮಾಡಿ ಎಕ್ಸ್ ಖಾತೆಯಲ್ಲಿ ಬರೆದಿರುವ ನಿಖಿಲ್ ಕುಮಾರ್ ಅಧಿಕಾರದ ಮದ ಎಂದಿದ್ದಾರೆ. ಕಾಂಗ್ರೆಸ ಸರ್ಕಾರ ಕೇವಲ ದುರಾಡಳಿತದಲ್ಲಿ ಮಾತ್ರವಲ್ಲ ದುರಹಂಕಾರದಲ್ಲೂ ಪರಮಾವಧಿ ಮೀರಿದೆ. ಅಧಿಕಾರದ ಮದದಲ್ಲಿ ಮುಖ್ಯಮಂತ್ರಿಗೆ ಒಬ್ಬ ಕರ್ತವ್ಯ ನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ದರ್ಪ ಬಂದಿದೆ… ಸಂವಿಧಾನದ ರಕ್ಷಣೆ ಎಂದು ನಾಟಕ ಮಾಡಿ, ಕಾನೂನಿನ ರಕ್ಷಕರ ಮೇಲೆ ಕೈ ಎತ್ತುತ್ತಿರುವದು ಅತಿರೇಕದ ವರ್ತನೆ ಹಾಗೂ ದರ್ಪವನ್ನು ಎಸೆಗುವ ಕೃತ್ಯ. ಇದು ಖಂಡನೀಯ ಎಂದು ಕೇಂದ್ರ ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳೆಂದರೆ ಕಾಂಗ್ರೆಸ್ಸಿಗರ ಅಡಿಯಾಳುಗಳಲ್ಲ! ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸ್‌ ಠಾಣೆಗಳನ್ನು ಕಾಂಗ್ರೆಸ್‌ ಕಚೇರಿಗಳಾಗಿ ಬದಲಾಯಿಸಿದ್ದು, ಪೊಲೀಸ್‌ ಅಧಿಕಾರಿಗಳನ್ನು ನಿಮ್ಮ ಆಳುಗಳು ಎಂದು ಭಾವಿಸಿದ್ದೀರಾ? ಪೊಲೀಸ್‌ ಅಧಿಕಾರಿಯ ಮೇಲೆ ಏಕವಚನ ಪ್ರಯೋಗಿಸಿದ್ದೂ ಅಲ್ಲದೇ ಹೊಡೆಯಲಿ ಕೈ ಎತ್ತಿದ್ದು ಖಂಡನೀಯ. ಈ ಹಿಂದೆ ವಿಜಯನಗರ ಡಿಸಿ ಮೇಲೂ ಏಕವಚನದಿಂದ ಬೈದು ಕುರ್ಚಿಯಿಂದ ಎಬ್ಬಿಸಿ ಆಚೆ ಕಳುಹಿಸಿದ್ದಿರಿ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ತಮ್ಮ ಹಿರಿತನವನ್ನು ತೋರಬೇಕಿದ್ದು ಕೆಲಸ ಕಾರ್ಯ, ರಾಜ್ಯದ ಅಭಿವೃದ್ಧಿಗಳಿಂದಲೇ ಹೊರತು ಈ ರೀತಿಯ ದರ್ಪ ದುರಹಂಕಾರದ ಮಾತುಗಳಿಂದಲ್ಲ. ಈ ರೀತಿಯ ವರ್ತನೆ ಮುಖ್ಯಮಂತ್ರಿ ಕುರ್ಚಿಗೆ ಶೋಭೆ ತರುವಂಥದ್ದಲ್ಲ ಎಂದು ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss