Stete News:
Feb:27:ಶಿವಮೊಗ್ಗ ಸೋಗಾನೆಯಲ್ಲಿ ಇಂದು ಸಂಒಪೂರ್ಣ ಕೇಸರಿ ಮಯವಾಗಿತ್ತು. ಒಂದೆಡೆ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಗೊಂಡರೆ ಮತ್ತೊಂದೆಡೆ ಮೋದಿ ಫ್ಲವರ್ ಶೋ ಜನತೆಗೆ ಮತ್ತಷ್ಟು ಬೆರಗು ನೀಡಿತ್ತು. ಇನ್ನೊಂದೆಡೆ ಕುಂದಾ ನಗರಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಜನಸಾಗರವೇ ತುಂಬಿ ಹೋಗಿತ್ತು. ಗಲ್ಲಿ ಗಲ್ಲಿಯಲ್ಲೂ ಮೋದಿ ಪರ ಘೋಷಣೆ ಕೇಳಿ ಬರುತ್ತಿತ್ತು. ಜೊತೆಗೆ ಬರೋಬ್ಬರಿ 10 ಕಿಲೋಮೀಟರ್ ವರೆಗೆ ಫ್ಲವರ್ ಶೋ ನಡೆದಿತ್ತು. ಚೆನ್ನಮ್ಮ ವೃತ್ತದಿಂದ ಪ್ರಧಾನಿ ಮೋದಿ ಕಾರ್ ಮೇಲೆ ನಿರಂತರ ಹೂಗಳ ಸುರಿಮಳೆಯನ್ನೇ ಹರಿಸಿದ್ರು ಕುಂದಾ ನಗರಿ ಜನತೆ. ಒಟ್ಟಾರೆ ಇಡೀ ಕುಂದಾನಗರಿಯೇ ಮೋದಿ ಮೇನಿಯಾದಲ್ಲಿ ಮುಳುಗಿ ಹೋಗಿಯತ್ತು.ಸತತ 1 ಗಂಟೆ 35 ನಿಮಿಷಗಳ ಕಾಲ ಮೋದಿ ರೋಡ್ ಶೋ ನಡೆಯಿತು. ಹರ ಹರ ಮೋದಿ ಎಂಬುವುದಾಗಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು.
ಅನೇಕ ಕಾಮಗಾರಿ ಶಂಕು ಸ್ಥಾಪನೆಗೆ ಕುಂದಾನಗರಿ ಬೆಳಗಾವಿಗೆ ಆಗಮಿಸಿದ ನರೇಂದ್ರ ಮೋದಿಗೆ ಜನರ ಅದ್ದೂರಿ ಸ್ವಾಗತಕ್ಕೆ ನಮೋ ಸಂತಸ ವ್ಯಕ್ತ ಪಡಿಸಿದ್ರು.