Tuesday, September 16, 2025

Latest Posts

ಕಮಲದ ವಿರುದ್ಧ ಸಿಡಿದೆದ್ದ ಮಹಿಳಾ ಮಣಿಗಳು…!

- Advertisement -

www.karnatakatv.net :ಬೆಳಗಾವಿ : ಬೆಳಗಾವಿ ಪಾಲಿಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ವಂಚಿತ ಬಿಜೆಪಿಯ ಮಹಿಳಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಕೆಂಡಾಮಂಡಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದೆ ಮಂಗಳಾ ಅಂಗಡಿ ಕಚೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು.

ಸಂಸದೆ ಮಂಗಳಾ ಅಂಗಡಿ ನಿವಾಸಕ್ಕೆ ತೆರಳಿದ 10ಕ್ಕೂ ಹೆಚ್ಚು  ಟಿಕೆಟ್ ವಂಚಿತ ಕಾರ್ಯಕರ್ತೆಯರು, ನಾವು ತಳ ಮಟ್ಟದಿಂದ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದೇವೆ. 15 ವರ್ಷಗಳಿಂದಲೂ ಪಕ್ಷಕ್ಕಾಗಿ ಕೆಲಸ ಮಾಡಿದ್ರೂ ನಮಗೆ ಒಂದು ಅವಕಾಶವನ್ನೂ ನೀಡಿಲ್ಲ. ಆದ್ರೆ ಹೊಸಬರಿಗೆ ಮಾತ್ರ ಮಣೆ ಹಾಕಲಾಗಿದೆ ಅಂತ ಆಕ್ರೋಶ ಹೊರಹಾಕಿದ್ರು. ಒಟ್ಟಾರೆ, ಟಿಕೆಟ್ ವಂಚಿತ ಮಹಿಳಾ ಮಣಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಇದು ಮಹಾನಗರ ಪಾಲಿಕೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು, ಇವರ ಅಕ್ರೋಶ ತಣ್ಣಗಾಗಿಸಲು ಬಿಜೆಪಿ ಮುಖಂಡರು ಯಾವ ಸೂತ್ರದ ಮೊರೆ ಹೋಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ನಾಗೇಶ್, ಕರ್ನಾಟಕ ಟಿವಿ- ಬೆಳಗಾವಿ

- Advertisement -

Latest Posts

Don't Miss