- Advertisement -
Belagavi News: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಶ್ರೀ ಬುರಾನ್ ಸಾಬ್ ದರ್ಗಾ ಸಂಪೂರ್ಣ ಜಲಾವೃತ ಗೊಂಡಿದ್ದು ಪ್ರವೇಶಕ್ಕೆ ನಿರ್ಬಂಧ ಹೆರಲಾಗಿದೆ.
ಕೃಷ್ಣ ನದಿ ನೀರಿನ ಪ್ರಾಮಾನದಲ್ಲಿ ಏರಿಕೆಯಾದ ಪರಿಣಾಮ ದರ್ಗಾ ಸುತ್ತಲೂ ನೀರು ಆವರಿಸಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪವಿತ್ರ ಸ್ಥಾನವಾದ ಬುರಾನ್ ಸಾಬ್ ದರ್ಗಾ ದರ್ಶನಕ್ಕೆ ಹೋಗಲು ದಾರಿಯಿಲ್ಲದೆ ಭಕ್ತರು ದೂರದಿಂದಲೆ ನಮಸ್ಕರಿಸಿ ಹಿಂದಿರಗುತ್ತಿದ್ದಾರೆ.
ಗ್ರಾಮದ ಸುತ್ತಲಿನ ನೂರಾರು ಎಕರೆ ಭೂ ಪ್ರದೇಶದಲ್ಲಿ ನೀರು ಅವರಿಸಿದ್ದು ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅಷ್ಟೇ ಅಲ್ಲದೆ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
- Advertisement -