- Advertisement -
ಬೆಂಗಳೂರು: ಉದ್ಯಮಿ ಸಿದ್ಧಾರ್ಥ್ ಆತ್ಮಹತ್ಯೆ ಆಪ್ತವಲಯದವರಲ್ಲಿ ಆಘಾತ ಮೂಡಿಸಿದೆ. ಈ ಮಧ್ಯೆ ಸಿದ್ಧಾರ್ಥ್ ಬಗ್ಗೆ ಸುದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ, ನನ್ನ ಗೆಳೆಯ ಸಿದ್ಧಾರ್ಥ್ ಬುದ್ಧನಾಗಲು ಹೊರಟ ಅಂತ ಭಾವುಕರಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ಸಿದ್ಧಾರ್ಥ್ ಸಾವಿನ ಕುರಿತು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.
ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅಲ್ಲದೆ ಸಿದ್ಧಾರ್ಥರನ್ನು ತಾವು ಮೊದಲು ಭೇಟಿಯಾಗಿದ್ದು ಹೇಗೆ, ಅವರು ಎಂಥಹಾ ವ್ಯಕ್ತಿಕ್ವವುಳ್ಳವರು ಎಂಬೆಲ್ಲಾ ಕುರಿತು ಸುದೀರ್ಘವಾಗಿ ಪತ್ರದಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಸಿದ್ಧಾರ್ಥ ಎಂದೆಂದಿಗೂ ನನಗೆ ಬುದ್ಧನೇ, ಆತನ ಸಾವಿನ ತನಿಖೆಯಿಂದ ಸತ್ಯ ಹೊರಬರಬೇಕು ಅಂತ ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ.
- Advertisement -