Saturday, October 5, 2024

Latest Posts

ಕಾಫಿ ಡೇ ಮುಂದುವರಿಕೆಗೆ ನಿರ್ದೇಶಕರ ತೀರ್ಮಾನ

- Advertisement -

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ದೇಶಾದ್ಯಂತ ಕಾಫಿಡೇ ನೌಕರರು ದುಃಖದಲ್ಲಿ ಮುಳುಗೋದಲ್ಲದೆ ಕೆಲಸ ಆತಂಕದಲ್ಲಿದ್ರು. ಆದ್ರೆ ಇದೀಗ ಕಾಫಿ ಡೇ ಮುಂದುವರಿಸಲು ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ದೇಶಾದ್ಯಂತ ಕಾಫಿ ಡೇ ಶಾಖೆಗಳನ್ನು ತೆರೆದಿದ್ದ ಉದ್ಯಮಿ ಸಿದ್ಧಾರ್ಥ್ ಸಾವಿರಾರು ಮಂದಿಗೆ ಉದ್ಯೋಗ ಪೂರ್ವ ತರಬೇತಿ ನೀಡಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ಸಿಬ್ಬಂದಿ ಕುರಿತಾಗಿ ಅಪಾರ ಕಾಳಜಿ ಹೊಂದಿದ್ದ ಸಿದ್ಧಾರ್ಥ್ ಒಂದು ದಿನವೂ ಕೂಡ ಸಂಬಳ ತಡವಾಗಿ ನೀಡಿದ ನಿದರ್ಶನವೇ ಇಲ್ಲ. ಆದ್ರೆ ಇಂತಹ ಮಾಲೀಕ ಇದೀಗ ಸಾವನ್ನಪ್ಪಿರುವ ಸುದ್ದಿ ಸಹಜವಾಗಿಯೇ ಸಾವಿರಾರು ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದೇ ಕೆಲಸವನ್ನು ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಸಾವಿರಾರು ಮಂದಿಗೆ ಕೆಲಸ ಕಳೆದಕೊಳ್ಳುವ ಭೀತಿಯೂ ಎದುರಾಗಿತ್ತು. ಆದ್ರೆ ಇದೀಗ ಈ ಕುರಿತು ಸಭೆ ನಡೆಸಿದ ಕಾಫಿ ಡೇ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್, ಸಂಸ್ಥೆಯನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದಾರೆ.

ಇನ್ನು ಸಿದ್ಧಾರ್ಥ್ ಕೂಡ ತಾವು ಸಾವನ್ನಪ್ಪುವ ಮುನ್ನ ಬರೆದಿದ್ದಾರೆ ಎನ್ನಲಾಗುವ ಪತ್ರದಲ್ಲಿ ತಮ್ಮ ವ್ಯಾವಹಾರಿಕ ನಷ್ಟದ ಕುರಿತು ಸವಿಸ್ತಾರವಾಗಿ ತಿಳಿಸಿ, ಕೊನೆಗೆ ಸಂಸ್ಥೆಯ ಬೋರ್ಡ್ ಆಫ್ ಡೈರೆಕ್ಟರ್ಸ್ ಸೇರಿದಂತೆ ಪ್ರತಿಯೊಬ್ಬ ಸಿಬ್ಬಂದಿ ಕೂಡ ಧೈರ್ಯವಾಗಿದ್ದು ಕಾಫಿ ಡೇ ಸಂಸ್ಥೆಯನ್ನು ಹೊಸ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಎಂದಿನಂತೆ ಮುಂದಿವರಿಸಿಕೊಂಡು ಹೋಗಬೇಕು ಅಂತಲೂ ಸಿದ್ಧಾರ್ಥ್ ಉಲ್ಲೇಖಿಸಿದ್ದಾರೆ. ಹೀಗಾಗಿ ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯ ಕಾಫಿ ಡೇ ಪ್ರಧಾನ ಕಚೇರಿ ‘ದಿ ಸ್ಕ್ವೇರ್’ ನಲ್ಲಿ ಸಭೆ ನಡೆಸಿದ ಬೋರ್ಡ್ ಆಫ್ ಡೈರೆಕ್ಟರ್ಸ್, ಯಾವುದೇ ಕಾರಣಕ್ಕೂ ಕಾಫಿ ಡೇ ಸಂಸ್ಥೆಯನ್ನು ಮುಚ್ಚೋದಿಲ್ಲ, ಬದಲಾಗಿ ಎಂದಿನಂತೆ ಮುಂದುವರಿಸುಕೊಂಡು ಹೋಗೋದಾಗಿ ಒಕ್ಕೊರಲಿನಿಂದ ನಿರ್ಧಾರ ಮಾಡಿದ್ದಾರೆ.

- Advertisement -

Latest Posts

Don't Miss