- Advertisement -
Bellary News: ಬಳ್ಳಾರಿ: ಬಳ್ಳಾರಿಯಲ್ಲಿ ಬಸ್ ಅಪಘಾತವಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುರುಗೋಡಿನಿಂದ ಬಳ್ಳಾರಿಗೆ ಸಾಗಿದ್ದ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಕುರುಗೋಡು ತಾಲೂಕು ಕೋಳುರು ಬಸ್ ಸ್ಟಾಪ್ ಬಳಿ ಈ ಘಟನೆ ನಡೆದಿದೆ.
ಕುರುಗೋಡು ಡಿಪೋಗೆ ಸೇರಿದ ಕೆಎ-34,ಎಫ್-2016 ಸರ್ಕಾರಿ ಬಸ್ ಕಂಬಕ್ಕೆ ಗುದ್ದಿದ್ದು, ಇದರ ಪರಿಣಾಮ ಕಂಬ ತುಂಡಾಗಿ 3 ಕಂಬ ಬಸ್ ಮೇಲೆ ಬಿದ್ದಿದೆ. ಕರೆಂಟ್ ಇಲ್ಲದ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ.
- Advertisement -