Bellary News: ಬಳ್ಳಾರಿ: ಬಳ್ಳಾರಿಯ ರಾಬಕೋವಿ ಅಧ್ಯಕ್ಷರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆಯಾಗಿದ್ದು, ಹಿಟ್ನಾಳ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುಲ ಹಿಟ್ನಾಳ್, ರಾಜ್ಯ ಕಂಡ ಶೋಷಿತ ಸಮಾಜದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡಿ.ಕೆ.ಶಿವಕುಮಾರ್ ಉಸ್ತುವಾರಿ ಸಚಿವರಾದ ಜಮೀರ್ ಅಹಮ್ಮದ್ ಸಹಕಾರದಿಂದ ಇಂದು ಈ ಪಟ್ಟ ದೊರೆತಿದೆ.
ಎಲ್ಲರೂ ರಾಯಚೂರು,ಬಳ್ಳಾರಿ,ಕೊಪ್ಪಳ ಮತ್ತು ವಿಜಯನಗರ (ರಾಬಕೋವಿ)ಅಧ್ಯಕ್ಷನಾಗಿ ಆಯ್ಕೆಯಾಗಿರುವೆ. ನನ್ನ ಅಧಿಕಾರ ಅವಧಿಯಲ್ಲಿ ರಾಬಕೋವಿ ಅಭಿವೃದ್ದಿಗೆ ಶ್ರಮಿಸುವೆ. ರೈತರಿಗೆ ಮತ್ತು ಹೈನುಗಾರಿಕೆ ಮಾಡುವವರಿಗೆ ಅನುಕೂಲವಾಗುವ ನೂತನ ತಂತ್ರಜ್ಞಾನ ತರಲಾಗುವುದು. ಮೆಗಾ ಡೈರಿ ಈ ಹಿಂದೆ ಬಂದಿತ್ತು ಕಾರಣಾಂತದಿಂದ ತಡವಾಗಿದೆ. ಮತ್ತೆ ವಾಪಸ್ಸ್ ಮೇಗಾ ಡೈರಿ ತರುವ ಕಾರ್ಯವಾಗುತ್ತದೆ. ನೀವು ಅಧ್ಯಕ್ಷರಾಗಿ ಆಯ್ಕೆ…. ಇದೊಂದು ಕ್ಷೀಪ್ರ ಬೆಳವಣಿಗೆ. ಹಿಂದಿನ ಅಧ್ಯಕ್ಷ ಭೀಮಾನಾಯ್ಕ್ ಧಮ್ ಇದ್ರೇ… ತಾಕತ್ ಇದ್ರೇ ಬನ್ನಿ ಅಧ್ಯಕ್ಷರಾಗಿ ಅಂತ ಸವಾಲ್ ಹಾಕಿದ್ರು. ನಾನು ಏನು ಅಂತ ತೋರಿಸಿರುವೇ ಈಗ.
ಅದಕ್ಕೆ ನಾನು ಏನು ಅಂತ ತೋರಿಸುವೇ ಅಂತ ಬಂದಿರುವೇ, ಹಾಗೇ ಅಧ್ಯಕ್ಷ ಆಗಿರುವೆ. ಈಗ ನಾನು ಆಧ್ಯಕ್ಷ ಆಗಿರುವೇ ಇದೇ ನನ್ನ ಧಮ್… ತಾಕತ್ತು…. ತೋರಿಸುತ್ತೆ.ಬಳ್ಳಾರಿಗೆ ಅನ್ಯಾಯವಾಗದಂತೆ ಮೇಗಾ ಡೈರಿ ಬಳ್ಳಾರಿಗೆ ತರುವೆ. ಈ ಚುನಾವಣೆಯಲ್ಲಿ ಭಾಗವಹಿಸಿರುವೇ ಗೆದ್ದಿರುವೇ ಮುಂದೆ ರಾಬಕೋವಿ ಅಭಿವೃದ್ದಿ ಪಡಿಸುವೆ. ರಾಜ್ಯ ಕೆಎಂಎಫ್ ಆಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಆಗುವುದ್ರ ಮೂಲಕ ವಿರೋಧಿಗಳಿಗೆ ನಿದೆಗೆಡಿಸಿರುವೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅರ್ಶಿವಾದಿಂದ ಗೆದ್ದಿದ್ದೇನೆ. ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ. ಮೆಗಾ ಡೈರಿ ಕೂಡ ಮಂಜೂರು ಆಗಿದೆ. ಈ ಹಾಲು ಒಕ್ಕೂಟವನ್ನ ಅಭಿವೃದ್ಧಿ ಪಡಿಸಲಾಗುವುದು. ಈ ಒಕ್ಕೂಟಕ್ಕೆ ನಾನು ಬರಬೇಕು ಅಂತಾ ಇರಲಿಲ್ಲ. ನಿರ್ದೇಶಕರ ಒತ್ತಾಯದ ಮೇರೆಗೆ ನಾನು ಅಧ್ಯಕ್ಷನಾಗುವೆ. ಹಿಂದಿನ ಅಧ್ಯಕ್ಷರು ನನಗೆ ಧಮ್, ತಾಕತ್ತು ಇದ್ರೆ ಬನ್ನಿ ಅಂತಾ ಸವಾಲು ಹಾಕಿದ್ರು. ಸವಾಲು ಸ್ವೀಕರಿಸಿ ನಾನು ಅಧ್ಯಕ್ಷನಾಗಿದ್ದೇನೆ. ರಾಜ್ಯಕ್ಕೆ ಯಾರನ್ನ ಡೆಲಿಗೇಷನ್ ಮಾಡಬೇಕು ಅಂತಾ ನಾವೆಲ್ಲಾ ನಿರ್ಧಾರ ಮಾಡ್ತೇವೆ ಎನ್ನುವ ಮೂಲಕ ಮಾಜಿ ಕೆಎಂಎಫ್ ಅಧ್ಯಕ್ಷ ವಿರುದ್ದ ರಾಘವೇಂದ್ರ ಹಿಟ್ನಾಳ್ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.




