State News:
ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂದಪಟ್ಟಂತೆ ಪೊಲೀಸರು ಸೂಕ್ತವಾದ ಪ್ರಕರಣ ದಾಖಲಿಸದೆ ಇರುವುದನ್ನು ಖಂಡಿಸಿ ಬೇಲೂರಿನ ಸರಕಾರಿ ಆಸ್ಪತ್ರೆಯ ವೈದ್ಯರೂ ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಗುರುವಾರ ಮದ್ಯಾಹ್ನ ಸಮಯದಲ್ಲಿ ಮಗುವೊಂದರ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ಮುನ್ನಾ ದರ್ಶನ್ ಎಂಬುವವರು ಆಂಬುಲೆನ್ಸ್ ಗೆ ಪಡೆಯುವ ಶುಲ್ಕದ ವಿಚಾರ ಕ್ಕೆ ಸಂಭಂದಿಸಿದಂತೆ ಏಕಾಎಕಿ ಹಲ್ಲೆ ನಡೆಸಲಾಗಿದೆ.ಇದನ್ನೂ ಓದಿ….ಶಾಸಕ ಹರೀಶ್ ಪೂಂಜಾರಿಗೆ ತಲವಾರು ಝಲಪಿಸಿದ ದುಷ್ಕರ್ಮಿಗಳು…!
ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಹಲ್ಲೆಗೊಳಗಾದ ಅಂಬುಲೆನ್ಸ್ ಚಾಲಕ ಗೋಪಾಲಕೃಷ್ಣ ೧೦೮ ವಾಹನ ಇಲ್ಲದ ಕಾರಣ ಬೇರೆ ವಾಹನ ೩೨೫ ರೂ ಶುಲ್ಕ ಪಾವತಿ ಮಾಡುವಂತೆ ಸೂಚಿಸಿದ್ದಕ್ಕೆ ಆಕ್ರೋಶ ಗೊಂಡ ನಿಡಗೋಡು ಗ್ರಾಮದ ದರ್ಶನ್ ಹಾಗೂ ಜೊತೆಗಾರರು ಏಕಾಏಕಿ ಹಲ್ಲೆನಡೆಸಿದ್ದರು.ಆಂಬುಲೆನ್ಸ್ ನಲ್ಲಿ ಹಾಸನಕ್ಕೆ ತೆರಳುವ ವೇಳೆ ಶುಶ್ರೂಕಿಯೊಬ್ಬರನ್ನು ಕಳಿಸಿಕೊಡುವಂತೆ ಒತ್ತಾಯಿಸಿ ಅವಾಚ್ಯ ಶಬ್ದದೊಂದಿಗೆ ನಿಂದಿಸಿದರು.
ಈ ಸಂಬಂಧ ಪೊಲೀಸರಿಗೆ ದೂರು ಕೊಡಲು ಹೋದಾಗ ಖಾಯಂ ಸೆಕ್ಷನ್ ೩೫೩ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದೆವು.ಆದರೆ ನಾವು ಗುತ್ತಿಗೆ ನೌಕರರು ಎಂಬ ಕಾರಣಕ್ಕೆ ಸೆಕ್ಷೆನ್ ೩೫೩ ಹಾಕಲು ಬರುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ….ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪ: ಸುನೀಲ್ ಕುಮಾರ್
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಕೆ ಎಸ್ ಲಿಂಗೇಶ್ ಮಾತನಾಡಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಖಾಯಂ ಹಗು ಹೊರಗುತ್ತಿಗೆ ಎಂಬ ತಾರತಮ್ಯ ಇಲ್ಲ ಎಲ್ಲರಿಗೂ ರಕ್ಷಣೆಯ ಅಗತ್ಯ ಇದೆ.ಹೊರಗುತ್ತಿಗೆ ನೌಕರರು ಎಂಬ ಕಾರಣಕ್ಕೆ ಸೆಕ್ಷೆನ್ ೩೫೩ ದಾಖಲಿಸಲು ಬರುವುದಿಲ್ಲ ಎಂಬುವುದು ತಪ್ಪು ಅಭಿಪ್ರಾಯ.ಈ ಬಗ್ಗೆ ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿ ಅವರ ಜೊತೆ ಚರ್ಚಿಸಿ ಪ್ರಕರಣ ದಾಖಲಿಸಲಾಗುವುದು.ಈ ವಿಚಾರದಲ್ಲಿ ಆತಂಕ ಬೇಡ ಹಾಗಾಗಿ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.ನೌಕರರ ರಕ್ಷಣೆ ದೃಷ್ಟಿಯಿಂದ ಒಬ್ಬ ಪೊಲೀಸ್ ಸಿಬ್ವಂದಿಯನ್ನು ನಿಯೋಜನೆ ಮಾಡಲಾಗುವುದು ಎಂದರು.ಇದನ್ನೂ ಓದಿ….“ಸೋನಿಯಾ ಕಾಲು ಹಿಡಿದು ಸಿಎಂ ಆಗಿದ್ದ ಸಿದ್ರಾಮಣ್ಣ”: ನಳಿನ್‍ಕುಮಾರ್ ಕಟೀಲ್
ಶಾಸಕರ ಅಭಿಪ್ರಾಯಕ್ಕೆ ಸ್ಥಳಕ್ಕೆ ಭೇಡಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ ವಿಜಯ್ ಸಹಮತ ವ್ಯಕ್ತಪಡಿಸಿ ದರು.ಇನ್ನಿತರ ಕೆಲವೊಂದು ಸಮಸ್ಯೆಗಳ ಬಗ್ಗೆ ಪ್ರತಿಭಟನಾಚಕಾರರಿಂದ ವ್ಯಕ್ತವಾದ ಬಗ್ಗೆ ಆಸ್ಪತ್ರೆಯಲ್ಲಿ ಸಭೆ ನಡೆಸಿ ಬಗೆಹರಿಸಿಕೊಳ್ಳುವ ಭರವಸೆಯನ್ನು ಶಾಸಕರು ನೀಡಿದರು.ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಮಳವಳ್ಳಿಯಲ್ಲಿ ಅತ್ಯಾಚಾರಕ್ಕೀಡಾದ ಬಾಲಕಿ ದಿವ್ಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಿಖಿಲ್ ಕುಮಾರಸ್ವಾಮಿ
ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪ: ಸುನೀಲ್ ಕುಮಾರ್