Monday, December 23, 2024

Latest Posts

ಗುತ್ತಿಗೆದಾರನಿಗೆ ಖಡಕ ಎಚ್ಚರಿಕೆ ಕೊಟ್ಟ ಶಾಸಕ ಬೆನಕೆ

- Advertisement -

www.karnatakatv.net : ಬೆಳಗಾವಿ: ನಗರದಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಿಗೆ ಸೊಕ್ಕು ಬಂದಿದೆ. ನಿಮ್ಮ ನಿರ್ಲಕ್ಷ್ಯದ ಕಾಮಗಾರಿಗೆ ಜನರು ಮೃತಪಡುತ್ತಿದ್ದಾರೆ. ಈ ರೀತಿ ಮತ್ತೆ ಮರುಕಳಿಸಿದರೆ ಕಂಬಕ್ಕೆ ಕಟ್ಟಿ ಹಾಕಿ ಹೊಡೆಯುತ್ತೇನೆ ಎಂದು ಶಾಸಕ ಅನಿಲ್ ಬೆನಕೆ ಗುತ್ತಿಗೆದಾರರಿಗೆ ಖಡಕ ಎಚ್ಚರಿಕೆ ನೀಡಿದರು.

ಭಾನುವಾರ ಕೇಂದ್ರ ಬಸ್ ನಿಲ್ದಾಣದ ಹಿಂಬದಿಯಲ್ಲಿ ಶನಿವಾರ ರಾತ್ರಿ ಮೃತಪಟ್ಟ ವ್ಯಕ್ತಿಯ ಸ್ಥಳಕ್ಕೆ ‌ಭೇಟಿ‌ ನೀಡಿದ ಅವರು, ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯದ ಕಾಮಗಾರಿಯಿಂದ ಜನರು ಮೃತಪಡುವಂತಾಗಿದೆ. ಕೇಂದ್ರ ಬಸ್ ನಿಲ್ದಾಣದ ಬಳಿ ಅಪೂರ್ಣ ಕಾಮಗಾರಿ ಮಾಡಿರುವ ಗುತ್ತಿಗೆದಾರ ಶಿವಕುಮಾರ ಮೇಲೆ ಕಿಡಿ ಕಾರಿರುವ ಶಾಸಕ ಅನಿಲ್ ಬೆನಕೆ ಅವನ ಮೇಲೆ ಪ್ರಕರಣ ದಾಖಲಿಸಿ ಬಂಧಿಸುವಂತೆ ಮಾರ್ಕೇಟ್ ಪೊಲೀಸರಿಗೆ ಸೂಚನೆ ನೀಡಿದರು.

- Advertisement -

Latest Posts

Don't Miss