Thursday, December 26, 2024

Latest Posts

ಕ್ಯಾಪ್ಸಿಕಂ ತಿಂದ್ರೆ ಆರೋಗ್ಯಕ್ಕೆ ಲಾಭಾನಾ..? ನಷ್ಟಾನಾ..?

- Advertisement -

ಕ್ಯಾಪ್ಸಿಕಂ ಅಂದ್ರೆ ದೊಣ್ಣ ಮೆಣಸಿನಕಾಯಿಯನ್ನ ನಾವು ಹಲವು ಪದಾರ್ಥಗಳಲ್ಲಿ ಬಳಸುತ್ತೇವೆ. ಪಲ್ಯ, ಸಾರು, ಸಾಂಬಾರ್, ಬಜ್ಜಿ ಹೀಗೆ ಹಲವು ರುಚಿಕರ ಪದಾರ್ಥದಲ್ಲಿ ನಾವು ಕ್ಯಾಪ್ಸಿಕಂ ಯ್ಯೂಸ್ ಮಾಡ್ತೇವೆ. ಆದ್ರೆ ಒಂದು ಪದಾರ್ಥಕ್ಕೆ ಅದ್ಭುತ ರುಚಿ ಕೊಡುವ ಈ ತರಕಾರಿ ಆರೋಗ್ಯಕ್ಕೆ ಲಾಭಾನಾ ನಷ್ಟಾನಾ..?.. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಕ್ಯಾಪ್ಸಿಕಂ. ಹಲವರಿಗೆ ಈ ತರಕಾರಿ ಅಂದ್ರೆ ತುಂಬಾ ಇಷ್ಟಾ ಆಗತ್ತೆ. ಯಾಕಂದ್ರೆ ಇದು ಒಂದು ಪದಾರ್ಥದ ರುಚಿಯನ್ನ ಹೆಚ್ಚಿಸುವ ಗುಣ ಹೊಂದಿದೆ. ನೀವು ಪಲಾವ್ ಅಥವಾ ರಸಂ, ಸಾಂಬಾರ್ ಮಾಡುವಾಗ ಒಂದೇ ಒಂದು ಪೀಸ್ ಕ್ಯಾಪ್ಸಿಕಂ ಬಳಸಿ ನೋಡಿ. ಅದರ ರುಚಿ ಹೆಚ್ಚುವುದಲ್ಲವೇ, ಘಮ ಕೂಡ ಸಖತ್‌ ಆಗಿರತ್ತೆ. ಇಂಥ ಟೇಸ್ಟಿ ತರಕಾರಿ ಆರೋಗ್ಯಕ್ಕೂ ಒಳ್ಳೆಯದು.

ಕ್ಯಾಪ್ಸಿಕಂನಲ್ಲಿ ಎರಡಿಂದ ಮೂರು ರೀತಿಯ ಕ್ಯಾಪ್ಸಿಕಂ ದೊರೆಯತ್ತೆ. ದೊಡ್ಡ ದೊಡ್ಡ ಶಹರದಲ್ಲಿ ಹಳದಿ, ಕೆಂಪು ಮತ್ತು ಕೇಸರಿ ದೊಣ್ಣ ಮೆಣಸಿನ ಕಾಯಿ ಸಿಗತ್ತೆ. ಆದ್ರೆ ಹಳ್ಳಿಗಳಲ್ಲಿ, ಮಾರ್ಕೆಟ್‌ನಲ್ಲಿ, ಸಣ್ಣ ಊರಿನಲ್ಲಿ ಬರೀ ಹಸಿರು ದೊಣ್ಣ ಮೆಣಸಿನ ಕಾಯಿ ಸಿಗತ್ತೆ. ಇದು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಳದಿ, ಕೆಂಪು ಮತ್ತು ಕೇಸರಿ ಕ್ಯಾಪ್ಸಿಕಂನ ಬೆಲ್‌ ಪೆಪ್ಪರ್ ಅಂತಾ ಕರೀತಾರೆ. ಇದನ್ನ ಹೆಚ್ಚಾಗಿ ಸ್ಯಾಲೆಡ್‌ಗಳಲ್ಲಿ, ಪಾಸ್ತಾಗಳಲ್ಲಿ ಬಳಸುತ್ತಾರೆ.

ಹಸಿರು ಕ್ಯಾಪ್ಸಿಕಂ ಕೂಡ ಹಸಿಯಾಗಿ ತಿನ್ನೋಕ್ಕೆ ರುಚಿಯಾಗಿರತ್ತೆ. ನೀವು ಸ್ಯಾಲೆಡ್, ಮೊಸರನ್ನ ಮಾಡುವಾಗ ಹಸಿಯಾದ ಹಸಿರು ಕ್ಯಾಪ್ಸಿಕಂನ ಸಣ್ಣ ಸಣ್ಣ ತುಂಡುಗಳಾಗಿ ಸೇರಿಸಿ, ರುಚಿಯಾಗಿಯೂ ಇರತ್ತೆ. ಆರೋಗ್ಯಕ್ಕೂ ಒಳ್ಳೆಯದು. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು, ದೊಣ್ಣ ಮೆಣಸಿನ ಕಾಯಿಯನ್ನ ಸೇವಿಸಬೇಕು. ನಿಯಮಿತವಾಗಿ ಲಿಮಿಟ್‌ನಲ್ಲಿ ಕ್ಯಾಪ್ಸಿಕಂ ಸೇವಿಸಿದ್‌ರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ವಿಟಾಮಿನ್ ಎ ಮತ್ತು ವಿಟಾಮಿನ್ ಸಿ ಯಿಂದ ಕ್ಯಾಪ್ಸಿಕಂ ಭರಪೂರವಾಗಿದ್ದು, ಹಾಗಾಗಿ ಇದನ್ನು ಸೇವಿಸುವುದರಿಂದ ಕಣ್ಣಿನ ಸಮಸ್ಯೆ ಮತ್ತು ದಂತ ಸಮಸ್ಯೆ ಬರುವುದಿಲ್ಲ. ಅಲ್ಸರ್ ಸಮಸ್ಯೆ ಇದ್ದವರು ದೊಣ್ಣ ಮೆಣಸಿನಕಾಯಿ ಬಳಸಬೇಕು. ಅಲ್ಲದೇ, ಮಲಬದ್ಧತೆ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿಯೂ ಇದು ಸಹಕಾರಿಯಾಗಿದೆ.  ಇನ್ನು ನಿಮಗೆ ಕ್‌ಯಾಪ್ಸಿಕಂ ಸೇವಿಸಿದ್ದಲ್ಲಿ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆದು, ನಂತರ ಸೇವಿಸುವುದು ಉತ್ತಮ.

- Advertisement -

Latest Posts

Don't Miss