ಬ್ರಾಹ್ಮಿ ಮುಹೂರ್ತದಲ್ಲಿ ನೀವು ಈ ಕೆಲಸ ಮಾಡಿದ್ರೆ ಯಶಸ್ಸು ಖಂಡಿತ..!

ಬ್ರಾಹ್ಮೀ ಮುಹೂರ್ತವೆಂಬುದು ಅತೀ ಶ್ರೇಷ್ಟವಾದ ಮುಹೂರ್ತವೆಂಬ ಮಾತಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಮದುವೆಯಾದ್ರೆ, ಜೀವನ ಉತ್ತಮವಾಗಿರುತ್ತೆ ಅಂತಾರೆ. ಇಷ್ಟೇ ಅಲ್ಲದೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಮಾಡುವುದರಿಂದ ಉತ್ತಮ ಪೂಜಾ ಫಲ ದೊರೆಯುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಓದುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ ಮತ್ತು ಅವರ ಭವಿಷ್ಯ ಕೂಡ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ. ಇವತ್ತು ನಾವು ಬ್ರಾಹ್ಮೀ ಮುಹೂರ್ತದ ವಿಶೇಷತೆ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬ್ರಾಹ್ಮೀ ಮುಹೂರ್ತವನ್ನ ಬ್ರಹ್ಮ ಮುಹೂರ್ತ ಅಂತಾನೂ ಕರಿಯಲಾಗುತ್ತದೆ. ಬೆಳಗ್ಗಿನ ಜಾವ 3 ಗಂಟೆಯ ಬಳಿಕ ಶುರುವಾಗುವ ಬ್ರಾಹ್ಮೀ ಮುಹೂರ್ತ, 4.30ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವೇಳೆ ದೇವತೆಗಳು ಪ್ರಸನ್ನರಾಗುವ ಸಮಯವಾಗಿರುತ್ತದೆ. ಅದಕ್ಕಾಗಿ ಈ ವೇಳೆ ನಾವು ಏನೇ ಕೆಲಸ ಮಾಡಿದ್ರು ಅದರಲ್ಲಿ ಯಶಸ್ಸು ಪಡೆಯುತ್ತೇವೆ.

ಈ ವೇಳೆಯಲ್ಲಿ ಎದ್ದು, ಯೋಗ, ಧ್ಯಾನ ಮಾಡಿದ್ರೆ, ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಮುಪ್ಪು ಅನ್ನೋದು ನಿಮ್ಮ ಬಳಿ ಸುಳಿಯುವುದಿಲ್ಲ. ಉತ್ತಮ ಆಯುಷ್ಯ ನಿಮ್ಮ ಪಾಲಾಗುತ್ತದೆ.

ಇಷ್ಟೇ ಅಲ್ಲದೇ ವಿದ್ಯಾರ್ಥಿಗಳು 4 ಗಂಟೆಗೆ ಎದ್ದು, ವಿದ್ಯಾಭ್ಯಾಸಕ್ಕೆ ಕುಳಿತರೂ ಸಾಕು. ನೆನಪಿನ ಶಕ್ತಿ ಹೆಚ್ಚಾಗುತ್ತಲ್ಲದೇ, ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುವಿರಿ.

ಇನ್ನು ಬ್ರಾಹ್ಮೀ ಮುಹೂರ್ತದಲ್ಲಿ ಹೋಮ ಹವನ, ವೃತ, ಪೂಜೆ, ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿಗಳನ್ನ ಮಾಡಿದ್ರೆ, ಅದರ ಸಂಪೂರ್ಣ ಫಲ ಪಡಿಯುತ್ತಾರೆಂಬ ನಂಬಿಕೆ ಇದೆ. ಆದ್ದರಿಂದ ಬ್ರಾಹ್ಮಿ ಮುಹೂರ್ತ ಎಲ್ಲ ಮುಹೂರ್ತಗಳಿಗಿಂತ ಶ್ರೇಷ್ಟವೆನ್ನಲಾಗಿದೆ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.

About The Author