ಭಾರತೀಯರ ಅಡುಗೆ ಕೋಣೆಯಲ್ಲಿ ಬಳಸುವ ಮಸಾಲೆ ಪದಾರ್ಥದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿರುವ ಮಸಾಲೆ ಎಂದರೆ ಲವಂಗ. ಹಲವು ಆರೋಗ್ಯಕರ ಗುಣಗಳಿಂದ ಭರಪೂರವಾಗಿರುವ ಲವಂಗ, ಅಡುಗೆಯಲ್ಲೂ ರುಚಿ ತರುವಂಥ ಗುಣ ಹೊಂದಿದೆ.
ಇಷ್ಟೇ ಅಲ್ಲದೇ, ಹಿಂದೂಧರ್ಮದಲ್ಲಿ ಲವಂಗಕ್ಕೆ ಪವಿತ್ರ ಸ್ಥಾನವಿದೆ. ನಾವೆಲ್ಲ ಪೂಜೆಗೆ ಮಲ್ಲಿಗೆ, ಸಂಪಿಗೆ, ಗುಲಾಬಿ ಎಂದು ತರಹ ತರಹದ ಹೂವು ಬಳಸುತ್ತೇವೆ. ಆದರೆ ಜೈನರು ದೇವರಿಗೆ ಲವಂಗವನ್ನೇ ಹೂವೆಂದು ಬಳಸುತ್ತಾರೆ.

ಜ್ಯೋತಿಷ್ಯದಲ್ಲಿ ಶಕ್ತಿವಾಹಕವೆಂದು ಕರೆಯಲ್ಪಡುವ ಲವಂಗ, ಮನುಷ್ಯನ ಅದೃಷ್ಟ ಬದಲಾವಣೆಯಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಾಲ ಪಡೆದವರು ಹಿಂದಿರುಗಿ ಕೊಡದಿದ್ದಲ್ಲಿ, ಯಶಸ್ಸಿಗಾಗಿ, ರಾಹು ಕೇತುವಿನ ತೊಂದರೆ ಇದ್ದಲ್ಲಿ, ಅಂದುಕೊಂಡ ಕೆಲಸ ಸರಾಗವಾಗಿ ಆಗಲು, ಕಾರ್ಯಸಾಧನೆಗಾಗಿ, ಮನೆಯ ಸಮೃದ್ಧಿಗಾಗಿ ಲವಂಗವನ್ನ ಬಳಸಲಾಗತ್ತೆ.
ಸಾಲ ಪಡೆದವರು ಹಿಂದಿರುಗಿ ಕೊಡದಿದ್ದಲ್ಲಿ ಹೀಗೆ ಮಾಡಿ:
ಕೊಟ್ಟವ್ವ ಕೋಡಂಗಿ ಈಸ್ಕಂಡವ್ವ ಈರಭದ್ರಾ ಅನ್ನೋ ಮಾತಿದೆ. ಕೊಟ್ಟ ಸಾಲ ವಾಪಸ್ ಕೊಡದೇ ಹೋದವರ ಬಗ್ಗೆ ಹಳ್ಳಿ ಜನ ಆಡೋ ಮಾತು ಇದು. ಇದಕ್ಕೆ ಲವಂಗದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹುಣ್ಣಿಮೆ ಅಥವಾ ಅಮವಾಸ್ಯೆಯ ರಾತ್ರಿ 11 ಅಥವಾ 21 ಲವಂಗವನ್ನ ಕರ್ಪೂರದೊಂದಿಗೆ ಸುಟ್ಟುಹಾಕಿ, ಲಕ್ಷ್ಮೀ ದೇವಿಯಲ್ಲಿ ಹಣ ವಾಪಸ್ ಸಿಗುವಂತೆ ಬೇಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮಗೆ ಬರಬೇಕಾದ ಹಣ ಬರುತ್ತದೆ.
ಯಶಸ್ಸು ನಿಮ್ಮದಾಗಿಸಲು ಬಳಸಿ ಲವಂಗ..!
ಯಾವ ಕೆಲಸಕ್ಕೆ ಹೋದ್ರೂ ಸಕ್ಸಸ್ ಸಿಗ್ತಾನೇ ಇಲ್ಲಾ. ಎಷ್ಟು ಟ್ಯಾಲೆಂಟ್ ಇದ್ರೂ ಅದಕ್ಕೆ ಯೋಗ್ಯವಾದ ಕೆಲಸಾನೇ ಸಿಗ್ತಿಲ್ಲಾ ಅನ್ನೋ ಪರಿಸ್ಥಿತಿ ನಿಮ್ಮದಾದ್ರೆ, ಕೆಲಸದ ಸಂದರ್ಶನಕ್ಕೆ ಹೊರಡೋ ಮೊದಲು ಬಾಯಲ್ಲಿ ಎರಡು ಲವಂಗ ಹಾಕಿ, ಕೊಂಚ ತಿಂದು ಕೊಂಚ ಬಾಯಲ್ಲೇ ಉಳಿಸಿಕೊಳ್ಳಿ. ನಿಮ್ಮ ಇಷ್ಟ ದೇವರನ್ನ ನೆನೆಸಿಕೊಂಡು ಕಾರ್ಯಸಿದ್ಧಿಗಾಗಿ ಪ್ರಾರ್ಥಿಸಿಕೊಳ್ಳಿ. ಹೀಗೆ ಮಾಡಿದ್ರೆ ಯಶಸ್ಸು ನಿಮ್ಮ ಪಾಲು.
ರಾಹು-ಕೇತು ತೊಂದರೆ ಇದ್ದರೆ ಹೀಗೆ ಮಾಡಿ..
ನಿಮ್ಮ ಜಾತಕದಲ್ಲಿ ರಾಹು ಕೇತುವಿನಿಂದ ತೊಂದರೆಯಿದ್ದಲ್ಲಿ, ಪ್ರತೀ ಶನಿವಾರ ಲವಂಗ ದಾನ ಮಾಡಿ. ಅಥವಾ ಶಿವನಿಗೆ ಲವಂಗ ಅರ್ಪಿಸಿ. ಸತತ 40 ಶನಿವಾರ ಹೀಗೆ ಮಾಡಿದರೆ, ರಾಹು ಕೇತುವಿನ ತೊಂದರೆ ನಿವಾರಣೆಯಾಗುತ್ತದೆ.
ಅಂದುಕೊಂಡ ಕೆಲಸ ಸರಾಗವಾಗಿ ಆಗಲು ಲವಂಗ ಸಹಕಾರಿ
ಏನೇ ಕೆಲಸ ಮಾಡಲು ಹೋದರೂ ಅಡ್ಡಿ ಆತಂಕ ಎದುರಾದರೆ, 3ರಿಂದ 4 ಲವಂಗವನ್ನ ಎಣ್ಣೆಯಲ್ಲಿ ಹಾಕಿ ದೀಪ ಬೆಳಗಿಸಿ, ಮನೆಯ ಕತ್ತಲೆಯ ಮೂಲೆಯಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಮನೆಮಂದಿಯ ಆರೋಗ್ಯದಲ್ಲಿ ಅಭಿವೃದ್ಧಿ ಕಾಣುವುದಲ್ಲದೇ, ಋಣಾತ್ಮಕ ಶಕ್ತಿ ಹೋಗುತ್ತದೆ.
ಕಾರ್ಯಸಿದ್ಧಿಗಾಗಿ ಹೀಗೆ ಮಾಡಿ..
ಕಾರ್ಯಸಿದ್ಧಿಗಾಗಿ ಮಂಗಳವಾರದಂದು ಹನುಮಂತನ ವಿಗ್ರಹದ ಮುಂದೆ ಮಲ್ಲಿಗೆ ಎಣ್ಣೆಯೊಂದಿಗೆ ಎರಡು ಲವಂಗ ಹಾಕಿ ದೀಪ ಹಚ್ಚಿ, ಹನುಮಾನ ಚಾಲೀಸಾ ಪಠಿಸಿ, ಪೂರ್ಣಗೊಳ್ಳಬೇಕಾದ ಕಾರ್ಯದ ಬಗ್ಗೆ ಬೇಡಿಕೊಂಡು ಪೂಜೆ ಮಾಡಿ. ಸತತ 21 ಮಂಗಳವಾರ ಈ ಕೆಲಸ ಮಾಡಿದರೆ, ಕಾರ್ಯ ಸಿದ್ಧಿಯಾಗುತ್ತದೆ.
ಮನೆಯ ಸಮೃದ್ಧಿಗಾಗಿ ಹೀಗೆ ಮಾಡಿ
ಮನೆಯಲ್ಲಿ ಧನಲಕ್ಷ್ಮಿ ನೆಲೆಸಿರಬೇಕು, ಮನೆ ಸಮೃದ್ಧಿಯಿಂದ ಕೂಡಿರಬೇಕು ಎಂದಿದ್ದಲ್ಲಿ, ಐದು ಕವಡೆಯೊಂದಿಗೆ, ಐದು ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ, ಹಣದ ಪೆಟ್ಟಿಗೆ ಅಥವಾ, ಕಪಾಟಿನಲ್ಲಿಡಿ. ಪ್ರತೀ ಶುಕ್ರವಾರ ಗುಲಾಬಿ ಹೂವಿನ ಜೊತೆ ಲವಂಗವನ್ನೂ ದೇವಿಗೆ ಅರ್ಪಿಸಿ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ ಮದುವೆ ಪ್ರೇಮ ವಿಚಾರ,
ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ
ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು .
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.