ಮನೆ ಯಜಮಾನಿ ಈ ದುರ್ಗಾ ಮಂತ್ರವನ್ನ ಪಠಿಸಿದ್ರೆ ಮನೆಯ ಅಭಿವೃದ್ಧಿ ಖಚಿತ..!

ವರಾಹ ಪುರಾಣದಲ್ಲಿ ಬರುವ ಈ ದುರ್ಗಾದೇವಿಯ ಮಂತ್ರವನ್ನ ಪಠಿಸಿದರೆ, ನಿಮ್ಮ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಕಾಣುವಿರಿ. ಇದನ್ನ ಮನೆ ಯಜಮಾನಿ ಪಠಿಸಿದರೆ ಇನ್ನೂ ಉತ್ತಮ. ಹಾಗಾದ್ರೆ ಯಾವುದು ಆ ಮಂತ್ರ..? ಆ ಮಂತ್ರವನ್ನ ಹೇಳುವಾಗ ಯಾವ ನಿಯಮವನ್ನ ಅನುಸರಿಸಬೇಕು ಇತ್ಯಾದಿ ಮಾಹಿತಿಯನ್ನ ತಿಳಿಯೋಣ ಬನ್ನಿ.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ಮನೆಯ ಯಜಮಾನಿ ಇಂದು ನಾವು ಹೇಳುವ ಮಂತ್ರವನ್ನ ಪ್ರತೀ ಶುಕ್ರವಾರದಂದು ತಲೆ ಸ್ನಾನ ಮಾಡಿ, ದೇವರ ಮುಂದೆ ಕುಳಿತು, ದುರ್ಗಾ ದೇವಿಗೆ ಪ್ರಾರ್ಥನೆ ಸಲ್ಲಿಸಿ 11 ಬಾರಿ ಮಂತ್ರ ಪಠಿಸಬೇಕು. ಮುಟ್ಟಿನ ದಿನಗಳಲ್ಲಿ, ಸೂತಕದ ದಿನಗಳಲ್ಲಿ, ಮಾಂಸಾಹಾರ ಸೇವಿಸಿದ ದಿನಗಳಲ್ಲಿ ಬಿಟ್ಟು ಉಳಿದೆಲ್ಲ ಶುಕ್ರವಾರ ಈ ಮಂತ್ರವನ್ನ ಹೇಳಬೇಕು. ಅತ್ಯುತ್ತಮ ಫಲ ಬೇಕಾದ್ದಲ್ಲಿ, ಪ್ರತೀ ಶುಕ್ರವಾರ 11 ಬಾರಿ ಈ ಮಂತ್ರವನ್ನ ಪಠಿಸಬೇಕು. ಆ ಮಂತ್ರ ಹೀಗಿದೆ..

ನಮೋಸ್ತುತೆ ತ್ರಿದಷರಿಪು ಕ್ಷಯಂಕರಿ
ನಮೋಸ್ತುತೆ ಶತಮಖ ಪಾದಪೂಜಿತೆ
ನಮೋಸ್ತುತೆ ಮಹೀಷ ವಿನಾಶನಕಾರಿಣಿ
ನಮೋಸ್ತುತೆ ಹರಿಹರ ಭಾಸ್ಕರಸುತೆ

ಈ ಮಂತ್ರವನ್ನ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಂಡು ಪ್ರತಿ ಶುಕ್ರವಾರ ಮಡಿಯಿಂದ 11 ಬಾರಿ ಈ ಮಂತ್ರವನ್ನ ಜಪಿಸಬೇಕು. ಹೀಗೆ ಜಪಿಸುವುದರಿಂದ, ಕೆಲ ದಿನಗಳಲ್ಲೇ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣುವಿರಿ. ಕುಟುಂಬದ ಜನ ಆರೋಗ್ಯವಾಗಿರುತ್ತಾರೆ. ಮನೆಯಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಸತಿ- ಪತಿ ಕಲಹ ಕಡಿಮೆಯಾಗುತ್ತದೆ. ಮನೆಯ ಏಳಿಗೆ ಕಾಣುತ್ತೀರಿ. ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಹೀಗೆ ಎಲ್ಲ ಸಮಸ್ಯೆ ದೂರವಾಗಿ, ದುರ್ಗೆಯ ರಕ್ಷಣೆಯಿಂದ ಅಭಿವೃದ್ಧಿ ಕಾಣುವಿರಿ.

ದೇವಿಯ ಪೂಜೆ ಮಾಡುವಾಗ, ವೃತ ಮಾಡುವಾಗ ಅಥವಾ ಮಂತ್ರೋಚ್ಛಾರಣೆ ಮಾಡುವಾಗ ತಪ್ಪು ಮಾಡಬೇಡಿ. ನೀವು ಮಾಡುವ ಭಕ್ತಿಯಲ್ಲಿ ಕೊಂಚ ತಪ್ಪಾದರೂ ಜೀವನದಲ್ಲಿ ಏರುಪೇರು ಕಾಣುವಿರಿ. ಯಾಕಂದ್ರೆ ದೇವಿಯ ಪೂಜೆ ವೃತಗಳನ್ನ ಮಾಡುವಾಗ ಅದರ ನಿಯಮಗಳನ್ನ ಪಾಲಿಸಲೇಬೇಕು.

ಮನಸ್ಸಿಗೆ ಬಂದಂತೆ ನೀವು ವೃತಾಚಣೆ ಮಾಡಿದರೆ, ಅದೃಷ್ಟ ಬರುವ ಜಾಗದಲ್ಲಿ ದುರಾದೃಷ್ಟ ಬರುತ್ತದೆ. ಮಂತ್ರೋಚ್ಛಾರಣೆ ತಪ್ಪು ತಪ್ಪಾಗಿ ಪಠಿಸಿದರೆ, ದೋಷ ಸುತ್ತಿಕೊಳ್ಳುತ್ತದೆ. ಇನ್ನು ಕೆಲವರು ವೃತಾಚರಣೆ ಮಾಡಲು ಮನಸ್ಸು ಮಾಡಿರುತ್ತಾರೆ. ಆದರೆ ಮಧ್ಯದಲ್ಲಿ ಮಾಂಸಾಹಾರಕ್ಕೆ ಆಸೆ ಪಟ್ಟು, ವೃತ ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ. ಹೀಗೆ ಮಾಡುವುದರಿಂದ ಜೀವನ ಪೂರ್ತಿ ಕಷ್ಟಪಡುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ವೃತ ಮಾಡಲೇಬೇಕೆಂದರೆ ಪೂರ್ತಿ ವೃತವನ್ನ ನಿಯಾಮಾನುಸಾರವಾಗಿ ಮಾಡಿಮುಗಿಸಬೇಕು.

ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9611663202

ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ

About The Author