ಅಂದ ಚಂದದ ಮೈಕಟ್ಟು ಹೊಂದಿದ, ಆರೋಗ್ಯಕರ ತ್ವಚೆಯನ್ನ ಹೊಂದಿದ ನಟಿಮಣಿಯರ ಸೌಂದರ್ಯದ ಗುಟ್ಟೇನು ಗೊತ್ತಾ..?.. ಯತೇಚ್ಛವಾದ ನೀರಿನ ಸೇವನೆ ಮತ್ತು ಗ್ರೀನ್ ಟೀ ಬಳಕೆ.
ಹೌದು, ಫಿಟ್ ಆ್ಯಂಡ್ ಫೈನ್ ಆಗಿದ್ದು, ಮೊಡವೆ ಕಾಣಿಸದ ತ್ವಚೆಯನ್ನೂ ಮೆಂಟೇನ್ ಮಾಡುವುದು, ಪ್ರತಿ ಕ್ಷಣ ಫ್ರೆಶ್ ಮೂಡ್‌ನಲ್ಲಿದ್ದು ಶೂಟಿಂಗ್‌ಗೆ ಸಾಥ್ ಕೊಡೋದು ಸುಲಭದ ಮಾತಲ್ಲ. ಇದೆಲ್ಲ ಸಾಧ್ಯವಾಗುವುದು ಉತ್ತಮ ಆಹಾರ ಸೇವನೆಯಿಂದ ಮಾತ್ರ. ಇಂತಹ ಉತ್ತಮ ಆಹಾರದಲ್ಲಿ ಗ್ರೀನ್ ಟೀ ಕೂಡ ಒಂದು.
ರುಚಿ ಇಲ್ಲದಿದ್ದರೂ, ಆರೋಗ್ಯವಾಗಿರಲು, ಉಲ್ಲಸಿತರಾಗಿರಲು ಗ್ರೀನ್ ಟೀ ಸಹಕಾರಿ. ಸೇವಿಸಲಷ್ಟೇ ಅಲ್ಲದೇ, ಗ್ರೀನ್ ಟೀ ಫೇಸ್ ಮಾಸ್ಕ್, ಹೇರ್ ಮಾಸ್ಕ್ ಹಾಕುವ ಮೂಲಕವೂ ಕೂಡ ಸೌಂದರ್ಯವನ್ನ ಕಾಪಾಡಿಕೊಳ್ಳಬಹುದು.
1..ಗ್ರೀನ್ ಟೀ ಪೌಡರನ್ನು ಬೌಲ್‌ಗೆ ಹಾಕಿ, ಅದರೊಂದಿಗೆ ಎರಡು ಚಮಚ ಜೇನುತುಪ್ಪ, ಅರ್ಧ ಚಮಚ ಮೊಸರು ಅಥವಾ ಹಾಲು, ಅರ್ಧ ಚಮಚ ನಿಂಬೆರಸ ಸೇರಿಸಿ ಪೇಸ್ಟ್ ತಯಾರಿಸಿ. ಮೊದಲು ಕೈಗೆ ಇದನ್ನ ಅಪ್ಲೈ ಮಾಡಿ. ಅಲರ್ಜಿಯಾಗದಿದ್ದಲ್ಲಿ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಪ್ರಯೋಗಿಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
2..ಇನ್ನು ಮುಖದಲ್ಲಿ ರಂಧ್ರಗಳ ಸಮಸ್ಯೆ ಇದ್ದವರು ಒಂದು ಕಪ್ ಗ್ರೀನ್ ಟೀ ಜೊತೆಗೆ, 1 ನಿಂಬೆಹಣ್ಣಿನ ರಸ ಮಿಕ್ಸ್ ಮಾಡಿ. ಈ ಮಿಶ್ರಣವನ್ನ ಸ್ಪ್ರೇ ಬಾಟಲಿಯಲ್ಲಿ ಸೇರಿಸಿ, ಮುಖ ತೊಳೆದ ಬಳಿಕ ಸ್ಪ್ರೇ ಮಾಡಿಕೊಳ್ಳಿ.
3.. ಹೆಚ್ಚಿನವರಿಗೆ ಕಣ್ಣಿನ ಸುತ್ತಲೂ ಕಪ್ಪು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರವೆಂದರೆ, ಉಪಯೋಗಿಸಿದ ಗ್ರೀನ್ ಟೀ ಬ್ಯಾಗನ್ನ 6 ಗಂಟೆ ಫ್ರಿಜ್‌ನಲ್ಲಿರಿಸಿ. ನಂತರ ಆ ಟೀ ಬ್ಯಾಗನ್ನ ಕಣ್ಣಿನ ಕೆಳಭಾಗ ಕಲೆಗಟ್ಟಿರುವ ಜಾಗದಲ್ಲಿ 10 ನಿಮಿಷ ಇರಿಸಿ, ಒಂದು ವಾರ ಹೀಗೆ ಮಾಡಿದ್ರೆ ಕಣ್ಣಿನ ಸುತ್ತಲಿರುವ ಕಪ್ಪನ್ನ ಹೋಗಲಾಡಿಸಬಹುದು.
4..ಸ್ಟೀಮ್ ತೆಗೆದುಕೊಳ್ಳುವಾಗ ಗ್ರೀನ್ ಟೀ ಬಳಸಿದರೆ ತ್ವಚೆಯಲ್ಲಿ ತಾಜಾತನ ಬರುತ್ತದೆ.
5..ಗ್ರೀನ್ ಟೀ ಬ್ಯಾಗನ್ನ ಬಿಸಿ ನೀರಿನಲ್ಲಿ ಅದ್ದಿ ಆ ನೀರನ್ನ, ತಲೆ ಸ್ನಾನ ಮಾಡುವಾಗ ಕೊನೆಗೆ ಬಳಸುವುದರಿಂದ ಕೂದಲಿನ ಸಮಸ್ಯೆಗಳು ಪರಿಹಾರವಾಗುತ್ತದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ