Wednesday, March 12, 2025

Latest Posts

ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..?

- Advertisement -

ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳವೂ ಕೂಡಾ ಒಂದು. ಅದರಲ್ಲೂ ಕಶ್ಮೀರಿ ಪ್ಯೂರ್ ಕೇಸರಿಯನ್ನ ನೀವು ಸೇವಿಸಿದರೆ, ಕೆಲ ದಿನಗಳಲ್ಲೇ ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..? ಅನ್ನೋದನ್ನ ನೋಡೋಣ ಬನ್ನಿ.

ಕೇಸರಿ ದಳವನ್ನ ಯಾವುದಾದರೂ, ಸಿಹಿ ತಿಂಡಿ, ಐಸ್‌ಕ್ರೀಮ್, ಮಿಲ್ಕ್‌ಶೇಕ್‌ಗಳಲ್ಲಿ ಹಾಕಿದ್ರೆ ಅದರ ಟೇಸ್ಟೇ ಬೇರೆ ಇರುತ್ತೆ. ಆದ್ರೆ ಆರೋಗ್ಯಕರವಾದ ಪದಾರ್ಥಗಳಲ್ಲಿ ನೀವು ಕೇಸರಿ ಬೆರೆಸಿ ತಿಂದ್ರೆ ಅದರಿಂದ ತುಂಬಾ ಲಾಭಗಳಿದೆ.

ಗರ್ಭಿಣಿಯರಿಗೆ ಹಾಲಿಗೆ ಕೇಸರಿ ದಳ ಬೆರೆಸಿ ನೀಡಲಾಗುತ್ತದೆ. ಇದರಿಂದ ಮಗುವಿನ ತ್ವಚೆ ಸುಂದರವಾಗುತ್ತದೆ.
ಇನ್ನು ಸೌಂದರ್ಯವನ್ನ ಇಮ್ಮಡಿಗೊಳಿಸಬೇಕೆಂದಲ್ಲಿ, ಕೇಸರಿ ದಳದ ಟೀ, ಕಶಾಯ, ಕೇಸರಿ ಮತ್ತು ಅರಿಶಿನ ಹಾಲು ಸೇವಿಸಬೇಕು.

ರಾತ್ರಿ ಮಲಗುವಾಗ ಅರಿಷಿನದ ಹಾಲಿಗೆ ಕೇಸರಿ ಬೆರೆಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೇ, ಚರ್ಮ ಆರೋಗ್ಯಕರವಾಗಿರುತ್ತದೆ.

ಇನ್ನು ನಿಮ್ಮ ದೇಹದಲ್ಲಿ ಉಷ್ಣತೆ ಮತ್ತು ಪಿತ್ತದ ಪ್ರಮಾಣ ಹೆಚ್ಚಿದ್ದಲ್ಲಿ, ಕೇಸರಿ ಸೇವನೆ ಕೊಂಚ ಕಡಿಮೆ ಮಾಡುವುದು ಉತ್ತಮ.

- Advertisement -

Latest Posts

Don't Miss