ಪುದೀನಾವನ್ನು ಹೆಚ್ಚಿನವರು ಪ್ರತಿದಿನ ಬಳಕೆ ಮಾಡೋಕ್ಕಿಂತ ಹೆಚ್ಚಾಗಿ ಚಾಟ್ಸ್‌ನಲ್ಲೇ ಯ್ಯೂಸ್ ಮಾಡ್ತೀವಿ. ಪಾನೀಪುರಿ, ಮಸಾಲ್ ಪುರಿ, ಕಚೋರಿ, ಸಮೋಸಾ ಯಾವ ಚಾಟ್ಸ್ ಆದ್ರೂ ಸರಿ ಪುದೀನಾ ಚಟ್ನಿ ಇಲ್ಲಾ ಅಂದ್ರೆ ಟೇಸ್ಟೇ ಬರಲ್ಲಾ. ಅಂಥ ಸೂಪರ್ ಟೇಸ್ಟ್ ಕೊಡುವ ಪುದಿನಾ ಎಲೆಯಿಂದ ಪೌಡರ್ ಕೂಡಾ ಮಾಡಲಾಗತ್ತೆ. ಆ ಪೌಡರ್‌ನಾ ಪ್ರತಿದಿನ ಬಳಸಿದ್ರೆ ನಮ್ಮ ಆರೋಗ್ಯ ಉತ್ತಮವಾಗಿರತ್ತೆ. ಹಾಗಾದ್ರೆ ಪ್ರತಿದಿನ ಪುದೀನಾ ಪೌಡರ್ ಬಳಸೋದ್ರಿಂದ ಆಗುವ ಲಾಭವಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪುದೀನಾ ಸೇವನೆಯಿಂದ ಜೀರ್ಣಶಕ್ತಿ ಉತ್ತಮವಾಗಿರುತ್ತದೆ. ಆದ್ದರಿಂದಲೇ ಮಿಂಟ್ ಜ್ಯೂಸ್‌ನಲ್ಲಿ ಮಿಂಟ್ ಲೀವ್ಸ್ ಯ್ಯೂಸ್ ಮಾಡೋದು. ಹೊಟ್ಟೆ ತುಂಬ ಊಟ ಮಾಡಿ, ಹೊಟ್ಟೆ ಭಾರಾ ಆಗಿದ್ರೆ ಉಗುರು ಬೆಚ್ಚು ನೀರಿನಲ್ಲಿ ಒಂದು ಸ್ಪೂನ್ ಪುದೀನಾ ಪೌಡರ್ ಹಾಕಿ ಕುಡಿಯಿರಿ. ನೀವು ತಿಂದ ಆಹಾರ ಕೆಲ ಹೊತ್ತಿನಲ್ಲೇ ಪಚನವಾಗುತ್ತದೆ.
ಎರಡನೇಯದಾಗಿ ಪುದೀನಾ ಪುಡಿಯ ಸೇವನೆಯಿಂದ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ನೀವು ಯಾವಾಗಲೂ ಟೆನ್ಶನ್‌ನಲ್ಲೇ ಇರುವ ವ್ಯಕ್ತಿಯಾಗಿದ್ದರೆ. ಯಾವಾಗಲೂ ಸಿಡುಕುತ್ತಿದ್ದರೆ, ನಿಮ್ಮ ಬುದ್ಧಿ ಶಕ್ತಿ ಚುರುಕಾಗಿರದಿದ್ದಲ್ಲಿ, ಪುದೀನಾ ಪುಡಿ ಬಳಕೆ ಮಾಡಿ. ಯಾಕಂದ್ರೆ ಪುದೀನಾ ಪುಡಿ ಸೇವಿಸೋದ್ರಿಂದಾ, ನಮ್ಮ ಮೆದುಳು ಶಾಂತವಾಗುತ್ತದೆ. ಕೂಲ್ ಆಗಿರೋದು ಅಂತಾರಲ್ಲ ಆ ಥರಾ ನಾವು ಕೂಡ ಟೆನ್ಶನ್ ಫ್ರೀಯಾಗಿ ಕೂಲ್ ಆಗಿ ಇರ್ತೀವಿ.
ಇನ್ನು ಮೂರನೇಯದಾಗಿ ಸ್ತನಪಾನ ಮಾಡಿಸುವವರು ಪುದೀನಾ ಪುಡಿ ಬಳಸಿದರೆ ಉತ್ತಮ. ಯಾಕಂದ್ರೆ ಸ್ತನಪಾನ ಮಾಡಿಸುವಾಗ ಕೆಲವರಿಗೆ ನೋವಾಗುತ್ತದೆ. ಹಿಂಸೆಯಾಗುತ್ತದೆ. ಅಂಥ ನೋವು ಗುಣವಾಗಬೇಕು ಅಂದ್ರೆ ಪುದೀನಾಪುಡಿ ಬಳಸಬೇಕು.
ನಾಲ್ಕನೇಯದಾಗಿ ಪುದೀನಾ ಪುಡಿ ಸೇವನೆಯಿಂದ ಹೊಟ್ಟೆ ಹಸಿವು ಹೆಚ್ಚುತ್ತದೆ. ಯಾರಿಗೆ ಹೆಚ್ಚು ಹೊಟ್ಟೆ ಹಸಿಯುವುದೇ ಇಲ್ಲ. ಆಹಾರ ಸೇರುವುದೇ ಇಲ್ಲವೆಂಬ ಸಮಸ್ಯೆ ಇರುತ್ತದೆಯೋ ಅಂಥವರು ಪುದೀನಾ ಪುಡಿ ಬಳಸಿ ನೋಡಿ. ಪುದೀನಾ ಪುಡಿ ಬಳಸೋದ್ರಿಂದ ಹಸಿವು ಹೆಚ್ಚಾಗುತ್ತದೆ. ಹಸಿವಾದಾಗ ನೀವು ಒಳ್ಳೆಯ ಆಹಾರವನ್ನೇ ಬಳಸಿ
ಇನ್ನು ಪುದೀನಾ ಪುಡಿ ಬಳಸೋದಾದ್ರೂ ಹೇಗೆ ಅಂದ್ರೆ, ನೀರಿಗೆ ಒಂದು ಸ್ಪೂನ್ ಪುದೀನಾ ಹಾಕಿ ಕರಡಿಸಿ ಕುಡಿಯಿರಿ. ತಿಂಡಿ ಬಳಿಕ ಮತ್ತು ಊಟದ ಮೊದಲು ಹಸಿವಾದಾಗ ನೀವು ಈ ಜ್ಯೂಸ್ ಮಾಡಿ ಕುಡಿಯಬಹುದು. ಇದರಿಂದ ಈ ಮೇಲೆ ಹೇಳಿದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.