ಯಾವ ಮನೆಯಲ್ಲಿ ಪ್ರತಿದಿನ ದೀಪ ಬೆಳಗುತ್ತದೆಯೋ, ಆ ಮನೆಯಲ್ಲಿ ದಾರಿದ್ರ್ಯ ಸಂಭವಿಸುವುದಿಲ್ಲ ಎನ್ನುವ ಮಾತಿದೆ. ಅಂತೆಯೇ ಹಿಂದೂಗಳಲ್ಲಿ ಮಾಸಗಳಿಗೆ ಹೆಚ್ಚಿನ ಮಹತ್ವವಿದೆ. ಆಷಾಢ ಮಾಸದಲ್ಲಿ ಒಂದು ವಿಶೇಷ ದೀಪ ಬೆಳಗಿದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಆ ಮಹತ್ನದ ದೀಪ ಬೆಳುಗುವುದಾದರೂ ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.

ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಮದುವೆಯಾದ ಹೊಸತರಲ್ಲಿ ಆಷಾಢ ಮಾಸ ಬಂತೆಂದರೆ ಆ ತಿಂಗಳು ಗಂಡ- ಹೆಂಡತಿ ಒಟ್ಟಿಗೆ ಇರುವಂತಿಲ್ಲ. ಅಂತೆಯೇ ಮುತ್ತೈದೇಯರು ಆಷಾಢ ಮಾಸದಲ್ಲಿ ವೃತಾಚರಣೆ ಮಾಡಿ, ಆಷಾಢ ಶುಕ್ರವಾರದಂದು ಪೂಜೆ ಮಾಡುತ್ತಾರೆ. ಏಕೆಂದರೆ ಆಷಾಢ ಶುಕ್ರವಾರವನ್ನ ಶುಭವೆಂದು ಪರಿಗಣಿಸಲಾಗಿದೆ.
4 ಆಷಾಢ ಶುಕ್ರವಾರದಂದು ನೀವೂ ಉಪ್ಪಿನ ದೀಪ ಹಚ್ಚಿದರೆ, ನಿಮ್ಮ ಮನೆಯಲ್ಲಿ ಕಲಹಗಳು ನಡೆಯುತ್ತಿದ್ದರೆ, ನಿರುದ್ಯೋಗ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಸುಖ- ಶಾಂತಿ ಇಲ್ಲದಿದ್ದರೆ, ಇವೆಲ್ಲದಕ್ಕೂ ಪರಿಹಾರ ಸಿಕ್ಕಿ, ನಿಮ್ಮ ಜೀವನದಲ್ಲಿ ಸುಖ- ಶಾಂತಿ- ಸಮೃದ್ಧಿ ನೆಲೆಸಿರುತ್ತದೆ.
ಆಷಾಢ ಶುಕ್ರವಾರದಂದು ಮನೆ, ಅಂಗಳವೆಲ್ಲ ಶುಭ್ರಗೊಳಿಸಿ, ನೀವೂ ಶುಭ್ರಗೊಂಡು ಲಕ್ಷ್ಮೀ ಪೂಜೆ ಮಾಡುವ ಸಂದರ್ಭದಲ್ಲಿ ಉಪ್ಪಿನ ದೀಪ ಹಚ್ಚಬೇಕು. ಒಂದು ಚಿಕ್ಕ ಮಣ್ಣಿನ ಪ್ಲೇಟ್‌ನಲ್ಲಿ ಕಲ್ಲುಪ್ಪು ಹಾಕಿ, ಕೊಂಚ ಅರಿಷಿನ ಮತ್ತು ಕೊಂಚ ಕುಂಕುಮ ಆ ತಟ್ಟೆಗೆ ಹಚ್ಚಿ, ತಟ್ಟೆಯ ಸುತ್ತಲೂ ಹೂವಿನಿಂದ ಅಲಂಕಾರ ಮಾಡಿ. ಈಗ ಕಲ್ಲುಪ್ಪಿನ ಮೇಲೆ ಎರಡು ಮಣ್ಣಿನ ಹಣತೆಯನ್ನಿರಿಸಿ, ಅದಕ್ಕೆ ತುಪ್ಪ ಅಥವಾ ಎಳ್ಳೆಣ್ಣೆ ಹಾಕಿ, ಹತ್ತಿಯ ಬತ್ತಿ ಇರಿಸಿ, ದೀಪ ಹಚ್ಚಿ, ದೇವರಿಗೆ ಮುಖ ಮಾಡಿ ಇರಿಸಿ. ಆಷಾಢದ ನಾಲ್ಕು ಶುಕ್ರವಾರ ಪೂಜೆ ಮಾಡುವಾಗ ಹೀಗೆ ಮಾಡಿ.
ಉಪ್ಪಿನ ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ಸಾಮಾನ್ಯವಾದ ಉಪ್ಪು ಬಳಸಬೇಡಿ. ಕಲ್ಲುಪ್ಪನ್ನೇ ಬಳಸಿ. ಇನ್ನು ದೀಪ ಹಚ್ಚಿದ ಬಳಿಕ ಕಲ್ಲುಪ್ಪನ್ನು ಶನಿವಾರದಂದು ಯಾವುದಾದರೂ ನದಿಗೆ ಹಾಕಿ. ಹತ್ತಿರದಲ್ಲಿ ನದಿ ಇಲ್ಲವಾದಲ್ಲಿ, ಯಾವುದಾದರೂ ಗಿಡ ಮರದ ಕೆಳಗೋ, ಅಥವಾ ನಿಮ್ಮ ಮನೆಯಲ್ಲಿರುವ ಸಿಂಕ್‌ನಲ್ಲಿ ಆ ಕಲ್ಲುಪ್ಪನ್ನು ಕರಗಿಸಿಬಿಡಿ.
ಇನ್ನು ಶುಕ್ರವಾರ ಬೆಳಿಗ್ಗೆ ದೀಪ ಹಚ್ಚುವುದಾದರೆ, ಸೂರ್ಯೋದಯಕ್ಕೂ ಮುನ್ನವೇ ದಿಪವನ್ನು ಬೆಳಗಬೇಕು. ಇಲ್ಲವೇ ಸೂರ್ಯಾಸ್ತದ ಬಳಿಕ ದೀಪ ಬೆಳಗಿಸಬೇಕು.
ಇಲ್ಲಿ ಮುಖ್ಯವಾದ ವಿಷಯವೆಂದರೆ, ಆಷಾಢ ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಮನೆಯಲ್ಲಿ ಮಾಂಸಾಹಾರ ಮಾಡಿರಬಾರದು, ಮತ್ತು ತಿಂದಿರಬಾರದು.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.