ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು..? ದೀಪದ ಬತ್ತಿ ಹೇಗಿರಬೇಕು ಗೊತ್ತಾ..?

ನಾವು ಈಗಾಗಲೇ ದೀಪಗಳ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ತುಪ್ಪದ ದೀಪ ಹಚ್ಚುವುದರ ಲಾಭವೇನು..? ಸ್ಟೀಲ್ ಹಣತೆಯಲ್ಲಿ ದೀಪವೇಕೆ ಹಚ್ಚಬಾರದು..? ಕಾಮಾಕ್ಷಿ ದೀಪದ ಮಹತ್ವವೇನು ಅನ್ನೋದರ ಬಗ್ಗೆ ಮಾಹಿತಿ ನೀಡಿದ್ದೇವೆ. ಅಂತೆಯೇ ಇವತ್ತು ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುವುದರ ಲಾಭವೇನು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.

ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648
ಪಂಡಿತ್ ರಾಘವೇಂದ್ರ ಶಾಸ್ತ್ರಿ

ಬೆಳ್ಳಿ ಹಣತೆಯಲ್ಲಿ ಸೂರ್ಯಕಾಂತಿ ಎಣ್ಣೆ, ಅಥವಾ ತುಪ್ಪ ಹಾಕಿ ದೀಪ ಹಚ್ಚುವುದರಿಂದ ಅಂಥ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ. ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ನೆಲೆಸಿರುತ್ತದೆ.

ಯಾರು ಸರಸ್ವತಿ ದೇವಿಗೆ ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುತ್ತಾರೋ, ಅಂಥವರು ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ. ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಉತ್ತಮ ಭವಿಷ್ಯ ಅವರದ್ದಾಗಿರುತ್ತದೆ. ಬಲಮುರಿ ಗಣಪತಿಗೆ ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚುತ್ತಾರೋ ಅಂಥವರು ಅಂದುಕೊಂಡ ಕೆಲಸ ನೆರವೇರುತ್ತದೆ.

ಸೂರ್ಯ ದೇವರಿಗೆ ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚಿದ್ರೆ, ಶತ್ರು ನಿವಾರಣೆ, ಆರೋಗ್ಯದಲ್ಲಿ ಅಭಿವೃದ್ಧಿ ಕಾಣುವಿರಿ. ದುರ್ಗಾದೇವಿಗೆ ಬೆಳ್ಳಿ ಹಣತೆಯಲ್ಲಿ ದೀಪ ಹಚ್ಚಿದ್ರೆ, ಮನೆಗೆ ಒಳ್ಳೆಯದು.

ಇನ್ನೊಂದು ವಿಷಯವೇನೆಂದರೆ, ದೀಪಕ್ಕೆ ಬಳಸುವ ದೀಪದ ಬತ್ತಿ ಉತ್ತಮವಾಗಿರಬೇಕು. ದೀಪದ ಬತ್ತಿ ಕೊಳೆಯಾಗಿದ್ದರೆ, ಆ ಮನೆಯಲ್ಲಿದ್ದವರಿಗೆ ಕಷ್ಟ ಹೆಚ್ಚಿರುತ್ತದೆ. ದೀಪದ ಬತ್ತಿ ಶುಭ್ರವಾಗಿದ್ದರೆ, ಆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ದೀಪದ ಬತ್ತಿ ಚಿಕ್ಕದಿದ್ದರೆ, ಆ ಮನೆಯ ಯಜಮಾನ ಜೀಪುಣನಾಗುತ್ತಾನೆ. ಈ ಕಾರಣಕ್ಕೆ ಮನೆಯಲ್ಲಿ ಜಗಳವಾಗುತ್ತದೆ. ಬತ್ತಿ ಅಗತ್ಯಕ್ಕಿಂತ ಉದ್ದವಿದ್ದರೆ, ಆ ಮನೆಯಲ್ಲಿ ಹಲವು ತರಹದ ಸಮಸ್ಯೆಗಳು ಉದ್ಭವಿಸುತ್ತದೆ ಎಂದರ್ಥ.

ಪಂಡಿತ್ ರಾಘವೇಂದ್ರ ಶಾಸ್ತ್ರಿ
ಕೇರಳ, ಕೊಳ್ಳೇಗಾಲದ ಅಗೋಚರ ಶಕ್ತಿಗಳಿಂದ ಉದ್ಯೋಗ, ದಾಂಪತ್ಯ, ಸ್ತ್ರೀ ಪುರುಷ ವಶೀಕರಣ, ಪ್ರೀತಿಯಲ್ಲಿ ನಂಬಿ ಮೋಸ, ಮಾಟ ಮಂತ್ರ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
ಫೋನಿನ ಮೂಲಕವೇ ನಿಮ್ಮ ಸಮಸ್ಯೆಗೆ ಪರಿಹಾರ
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648

About The Author