ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಸಾರ್ವಜನಿಕರು ಬೆಳಿಗ್ಗೆ ಮತ್ತು ಸಾಯಂಕಾಲ ಪಾರ್ಕ್ ಗಳಿಗೆ ಹೋಗಲು ಹೆದರುತಿದ್ದಾರೆ. ಹಾಗಾಗಿ ಸಾರ್ವಜನಿಕರು ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಪಾಲಿಕೆಗೆ ಒತ್ತಾಯಿಸುತ್ತಿದ್ದಾರೆ.
2019 ರಲ್ಲಿ ನಡೆದ ಬಿಬಿಎಂಪಿ ಸಮಿಕ್ಷೆ ಪ್ರಕಾರ ನಗರದಲ್ಲಿ3.10 ಲಕ್ಷ ಬೀದಿ ನಾಯಿಗಳಿದ್ದವು ಬೀದಿನಾಯಿಗಳ ಸಂಖ್ಯೆ ಕಡಿಮೆ ಮಾಡಲು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲಾಗಿತ್ತು ಹಾಗಾಗಿ 2023 ರಲ್ಲಿ ಅವುಗಳ ಸಮಿಕ್ಷೆ ನಡೆಸಿದ್ದಾರೆ. ಈಗಾಗಲೆ ರಾಜ್ಯ ಪಶುಸಂಗೋಪನೆ ಇಲಾಖೆಯಿಂದ 50 ತಂಡಗಳನ್ನು ರಚನೆ ಮಾಡಿದ್ದು ತಂಡದ ಸದಸ್ಯರು ತಲಾ ಇಬ್ಬರಂತೆ ನೇಮಕ ಮಾಡಿ ಒಬ್ಬರು ದ್ವಿಚಕ್ರ ವಾಹನ ಚಲಾಯಿಸಿದರೆ ಹಿಂದೆ ಇರುವವರು ನಾಯಿಗಳ ಫೋಟೊ ತೆಗೆದು ಅಪ್ಲೋಡ್ ಮಾಡಬೇಕು.
ಡೇಟಾ ಆಧಾರದ ಮೇಲೆ ಈಗಾಗಲೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಲಾಗಿದೆ.ಜುಲೈ 1 ರಿಂದ ಸಮಿಕ್ಷೆ ಶುರುಮಾಡಿದ್ದು15 ದಿನಗಳಲ್ಲಿ ಸಮಿಕ್ಷೆ ಪೂರ್ಣಗೊಂಡ ನಂತರ ಡೇಟಾವನ್ನು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ಸಗೆ ಕಳುಹಿಸಲಾಗುತ್ತೆ.
Mysore Dasara: ದಸರಾಗೆ ಬರುವ ಹೆಣ್ಣು ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್
Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ ಫ್ಯಾನ್ಸ್ ವಾರ್..!