- Advertisement -
Bengaluru: ಆಟೋದಲ್ಲಿ ಬ್ಯಾಗ್ ಇಡುವ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಕ್ಕೆ ಕೈ ಹಾಕಿ ಆಟೋ ಡ್ರೈವರ್ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ.
ಆಟೋ ಚಾಲಕ ಹನುಂತಪ್ಪ ತಳವಾರ್ ಆಗಿದ್ದು, ಈತನೇ ಅಶ್ಲೀಲವಾಗಿ ವರ್ತಿಸಿದ್ದಾನೆ. ಓರ್ವ ಯುವತಿ ಜೆಪಿ ನಗರದ ಸೆವೆಂತ್ ಕ್ರಾಸ್‌ನಿಂದ ಆಟೋ ಬುಕ್ ಮಾಡಿದ್ದಾಳೆ. ಈ ವೇಳೆ ಆಕೆಯ ಬಳಿ ಬ್ಯಾಗ್ ಇಡುವ ನೆಪ ಮಾಡಿದ ಚಾಲಕ, ಆಕೆಯ ಖಾಸಗಿ ಅಂಗ ಟಚ್ ಮಾಡಿದ್ದಲ್ಲದೇ, ನೀನು ಹಿರೋಯಿತ್ ಥರಾ ಇದಿಯಾ ಎಂದಿದ್ದಾನಂತೆ.
ಅಲ್ಲದೇ ಯುವತಿ ಆಟೋದಲ್ಲಿ ಕೂರುತ್ತಿದ್ದಂತೆ, ಮೈ ಮುಟ್ಟಿ ಜ್ವರ ಇದೆಯಾ ಎಂದು ಕೇಳಲು ಬಂದಾಗ, ಯುವತಿ ಆಟೋದಿಂದ ಕೆಳಗಿಳಿದಿದ್ದಾಳೆ. ಬಳಿಕ ಪುಟ್ಟೇನಹಳ್ಳಿ ಪೋಲೀಸ್ ಸ್ಟೇಶನ್‌ಗೆ ಬಂದು ಆಕೆ ಪೋಲೀಸ್ ಕಂಪ್ಲೆಂಟ್ ನೀಡಿದ್ದಾಳೆ. ದೂರಿನ ಆಧಾರದ ಮೇರೆಗೆ ಪೋಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಸದ್ಯ ಪೋಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -