- Advertisement -
Bengaluru : ಬೆಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. 26 ವರ್ಷದ ವೈಭವ್ ಕುಲಕರ್ಣಿ ಮೃತ ದುರ್ದೈವಿ. ವಿಜಯಪುರ ಜಿಲ್ಲೆಯವರಾಗಿದ್ದ ವೈಭವ್‌ಗೆ ಅದಾಗಲೇ ಉಸಿರಾಟದ ಸಮಸ್ಯೆ ಇತ್ತು.
ಬಾಗಲಕೋಟೆಯ ಬಿವಿವಿಎಸ್ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ವೈಭವ್ ಪ್ರವಾಸಕ್ಕೆ ಹೋಗಿ ಬರುವಾಗ, ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ವೈಭವ್ ರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ವೈಭವ್ ಸಾವನ್ನಪ್ಪಿದ್ದಾರೆ. ಇವರ ಕುಟುಂಬಸ್ಥರು ಇವರ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕ“ಂಡು ಹೋಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ವೈಭವ್ ಪರಿಚಯಸ್ಥರು, ವೈಭವ್ ಓರ್ವ ಉತ್ತಮ ವಿದ್ಯಾರ್ಥಿಯಾಗಿದ್ದ. ಅವನ ತಂದೆ ತಾಯಿ, ಮಗ ವೈದ್ಯನಾಗಿ ಬರುತ್ತಾನೆ ಎಂದು ಕನಸು ಕಂಡಿದ್ದರು. ಮೆಡಿಕಲ್ ಓದಿಸುತ್ತಿದ್ದರು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
- Advertisement -