Bengaluru: ಈ ಬಾರಿ ಸಖತ್ ಸದ್ದು ಮಾಡಿರುವ ಸುದ್ದಿಗಳಲ್ಲಿ ಪ್ರಥಮ ಸುದ್ದಿ ಅಂದ್ರೆ ಧರ್ಮಸ್ಥಳ ಸುದ್ದಿ. ಧರ್ಮಸ್ಥಳದ ಹಲವು ಭಾಗಗಳಲ್ಲಿ ನಾನು ಶವಗಳನ್ನು ಹೂತುಹಾಕಿದ್ದೇನೆ. ಅದನ್ನು ತೋರಿಸುತ್ತೇನೆ ಅಂತಾ ಮಾಸ್ಕ್ ಮ್ಯಾನ್ ಬಂದು, ಯಾವ ಬುರುಡೆಯೂ ಸಿಗದೇ, ಬುರುಡೆ ಗ್ಯಾಂಗ್‌ನ್ನೇ ಸದ್ಯ ವಿಚಾರಣೆ ನಡೆಸಲಾಗುತ್ತಿದೆ.
ಹಾಗಾಗಿ ನಾವಿರಿಸಿರುವ ನಂಬಿಕೆ ಸುಳ್ಳಾಗಲಿಲ್ಲ. ಧರ್ಮ ರಕ್ಷತಿ ರಕ್ಷಿತಃ ಅಂತಲೇ, ಭಕ್ತರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಬೆಂಗಳೂರಿನ ಗಣೇಶೋತ್ಸವದಲ್ಲಿ ಈ ಬಾರಿ, ಧರ್ಮಸ್ಥಳ ಥೀಮ್‌ನ ಗಣಪನನ್ನೇ ಪ್ರತಿಷ್ಠಾಪಿಸಲಾಗಿದೆ.
ಇಲ್ಲಿ ಗಣಪ ವೀರೇಂದ್ರ ಹೆಗ್ಗಡೆಯವರಂತೆ ಉಡುಗೆ ಧರಿಸಿದ್ದು, ಹಿಂದೆ, ಬುರುಡೆ ಗ್ಯಾಂಗ್ ಕಂಬಿ ಎಣಿಸುತ್ತಿದೆ. ಈ ಗ್ಯಾಂಗ್‌ನಲ್ಲಿ ತಿಮರೋಡಿ, ಗಿರೀಶ್, ಸಮೀರ್, ಮಾಸ್ಕ್ ಮ್ಯಾನ್ ಎಲ್ಲರೂ ಇದ್ದಾರೆ. ಮಧ್ಯದಲ್ಲಿ ಸೌಜನ್ಯಳ ಫೋಟೋ ಹಾಕಿ, ಧರ್ಮಸ್ಥಳವನ್ನು ರಕ್ಷಿಸು ಶ್ರೀ ಮಂಜುನಾಥ ಸ್ವಾಮಿ ಎಂದು ಬರೆಯಲಾಗಿದೆ. ಅಲ್ಲದೇ, ಖಾವಂದರು ಬೇರೆ ಬೇರೆ ಗಣ್ಯರ ಜತೆ ಇರುವ ಚಿತ್ರವನ್ನೂ ಇಡಲಾಗಿದೆ.
ಗಣಪನ ಹಿಂದೆ ಶ್ರೀ ಮಂಜುನಾಥನ ಫೋಟೋ ಇರಿಸಲಾಗಿದೆ. ಮುಂದೆ ಬೋರ್ಡ್ ಹಾಕಿ, ಧರ್ಮೋ ರಕ್ಷತಿ ರಕ್ಷಿತಃ ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮ ರಕ್ಷಿಸುತ್ತದೆ ಅಂತಾ ಬರೆಯಲಾಗಿದೆ.