Bengaluru: ರ್ಯಾಪಿಡೋ ಬೈಕ್ Taxi ಚಾಲಕನಿಂದ ನಡುರಸ್ತೆಯಲ್ಲಿ ಯುವತಿ ಮೇಲೆ ಹ*ಲ್ಲೆ..

Bengaluru News: ರ್ಯಾಪಿಡೋ ಬೈಕ್ Taxi ಚಾಲಕನೋರ್ವ ಯುವತಿಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

ಜೂನ್ 14ರಂದು ಚಾಲಕ ಸುಹಾಸ್, ಯುವತಿ ಶ್ರೇಯಾ ಮೇಲೆ ಹಲ್ಲೆ ಮಾಡಿದ್ದು, ಸ್ಪೀಡ್ ಆಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ಹಲ್ಲೆ ನಡೆಸಿದ್ದಾನೆಂದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಲಾಗಿದೆ. ಆದರೆ ಜಯನಗರ ಪೋಲೀಸರು ಎನ್‌ಸಿಆರ್ ದಾಖಲಿಸಿ, ಕೈತ“ಳೆದುಕ“ಂಡಿದ್ದಾರೆನ್ನಲಾಗಿದೆ.

ಆಗಿದ್ದೇನು..?

ಶ್ರೇಯಾ ರ್ಯಾಪಿಡೋ ಬೈಕ್ ಬುಕ್ ಮಾಡಿ, ಮನೆಗೆ ಹೋಗುತ್ತಿದ್ದಾಗ, ಅದನ್ನು ಚಲಾಯಿಸುತ್ತಿದ್ದ ಚಾಲಕ, ರ್ಯಾಶ್ ಆಗಿ ಡ್ರೈವ್ ಮಾಡುತ್ತಿದ್ದು, ಅದನ್ನು ಶ್ರೇಯಾ ಪ್ರಶ್ನಿಸಿದ್ದಾರಂತೆ. ಆದರೆ ಇದಕ್ಕೆ ಕೋಪವಾದ ಚಾಲಕ, ನಡುರಸ್ತೆಯಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಆದರೆ ಈ ಬಗ್ಗೆ ಸುಹಾಸ್ ಕೂಡ ಪ್ರತಿಕ್ರಿಯಿಸಿದ್ದು, ನಾನು Shortcutನಲ್ಲಿ ಬಂದೆ ಎಂದು ಆಕೆ ನನಗೆ ಇಂಗ್ಲೀಷಿನಲ್ಲಿ ಬೈಯ್ಯುತ್ತಿದ್ದರು. ಆದರೆ ನಾನು  5 ವರ್ಷದಿಂದ ರ್ಯಾಪಿಡೋ ಬೈಕ್ ಓಡಿಸುತ್ತಿದ್ದೇನೆ. ಸರಿಯಾಗಿಯೇ ಕರೆದುಕ“ಂಡು ಹೋಗುತ್ತೇನೆ ಎಂದು ಹೇಳಿದೆ. ಆದರೂ ಅವರು ನನಗೆ ಇಂಗ್ಲೀಷಿನಲ್ಲಿ ಕೆಟ್ಟದಾಗಿ ಬೈದು, ತಮ್ಮ ಟಿಫಿನ್ ಬಾಕ್ಸ್‌ನಿಂದ ಬಡಿದರು. ನಡುರಸ್ತೆಯಲ್ಲಿ ಬಡಿದಿದ್ದಕ್ಕೆ ನನಗೆ ಮುಜುಗರವಾಯಿತು, ಕೋಪ ಬಂತು ಅದಕ್ಕೆ ನಾನು ಹಲ್ಲೆ ಮಾಡಿದೆ ಎಂದು ಸುಹಾಸ್ ಹೇಳಿದ್ದಾನೆ.

ಅಲ್ಲದೇ ಆಕೆ ಕೆಲಸ ಮಾಡುವ ಅಂಗಡಿಗೆ ಕಾಲ್ ಮಾಡಿದಾಗ, ಮ್ಯಾನೇಜರ್ ಕೂಡ ಆಕೆ ಕೆಲಸ ಮಾಡುವಾಗಲೂ ಅದೇ ರೀತಿ ವರ್ತಿಸುತ್ತಾಳೆಂದು ಹೇಳಿದಳು. ಹಾಗಾಗಿ ನಾನು ಸುಮ್ಮನಾದೆ. ಇದೀಗ ಪೋಲೀಸರು ದೂರು ದಾಖಲಿಸಿದ್ದಾರೆ. ತನಿಖೆಗೆ ನಾನು ಸಹಕರಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ, ಆಕೆಗೆ ಹಲ್ಲೆ ಮಾಡುವ ವೀಡಿಯೋ ಮಾತ್ರ ವೈರಲ್ ಆಗಿದೆ.

About The Author