Friday, December 27, 2024

Latest Posts

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಸೈಕಲ್ ಜಾಥಾ

- Advertisement -

ರಾಯಚೂರು: ಮಹಿಳೆಯರ ಮೇಲೆ ದಿನೆ ದಿನೆ ಕಿರುಕುಳ, ಅತ್ಯಾಚಾರ, ಹಿಂಸೆ, ದೌರ್ಜನ್ಯ ಪ್ರಕರಣ ಖಂಡಿಸಿ ವಿದ್ಯಾರ್ಥಿಯೋರ್ವ ಸೈಕಲ್ ಜಾಥಾ ನಡೆಸುತ್ತಿದ್ದಾನೆ.  ಇಂತಹ ಹೇಯ ಕೃತ್ಯಗಳ ಮೇಲೆ ಕಡಿವಾಣ ಹಾಕಬೇಕಾಗಿದೆ. ಇದಕ್ಕಾಗಿ ಕಳೆದ 2021ರ ಆಗಸ್ಟ್​ 22ರಿಂದ ಸೈಕಲ್ ಜಾಥಾ ನಡೆಸುತ್ತಿದ್ದಾನೆ. ಈಗಾಗಲೇ 7 ಜಿಲ್ಲೆಗಳಿಗೆ ಭೇಟಿ ನೀಡಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾನೆ .

ಬೆಂಗಳೂರು ಮೂಲದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ ಕಿರಣ್ ಕುಮಾರ್ ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸ್ತಿದ್ದಾರೆ. ಈ ಮೂಲಕ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರೋ ದೌರ್ಜನ್ಯ ಪ್ರಕರಣ ಖಂಡಿಸಿ ಒಂಟಿಯಾಗಿ ಜಾಥಾ ಕೈಗೊಂಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತೆರಳಿ ಆಯಾ ಡಿಸಿಗಳಿಗೆ ಈ ಕುರಿತು ಮನವಿ ಮಾಡಿದ್ದಾರೆ. ಈಗಾಗಲೇ 7 ಜಿಲ್ಲೆಗಳಿಗೆ ತೆರಳಿರೋ ಕಿರಣ್ ಕುಮಾರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇನ್ನು ಆಗಸ್ಟ್ 22 ರಿಂದ ಸೈಕಲ್ ಜಾಥಾ ನಡೆಸ್ತಿರೋ ಈ ಯುವಕ ಇದೀಗ ರಾಯಚೂರು ತಲುಪಿದೆ. ಈತನ ಈ ಕಾರ್ಯ ಮೆಚ್ಚುಗೆ ಪಾತ್ರವಾಗಿದೆ.

- Advertisement -

Latest Posts

Don't Miss