Thursday, February 13, 2025

Latest Posts

BENGALURU: ಮಾಜಿ ಕುಲಪತಿ ಜೊತೆ ಪತ್ನಿ ಸಂಬಂಧ!, ಅಕ್ರಮ ಸಂಬಂಧಕ್ಕೆ ಜೀವ ಬಿಟ್ಟ ಗಂಡ

- Advertisement -

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಲ್ಲಿ ನೆಲೆಸಿದ್ದ ಲಾರಿ ಮಾಲೀಕ 45 ವರ್ಷದ ಸೋಮಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಆಗಿರೋ ಸೋಮಶೇಖರ್, ತನ್ನ ಪತ್ನಿ ಪವಿತ್ರಾಳನ್ನ ಡಿಗ್ರಿ ಓದಿಸಿ ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿಸಿದ್ದರಂತೆ.. 2 ವರ್ಷದಿಂದ ಪವಿತ್ರಾ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ರು.. ಈ ವೇಳೆ ಮಾಜಿ ಕುಲಪತಿ ಹಣದ ಆಸೆ ತೋರಿಸಿ ಪವಿತ್ರಾಳನ್ನ ಬುಟ್ಟಿಗೆ ಹಾಕ್ಕೊಂಡಿದ್ರಂತೆ.. ಪವಿತ್ರಾ ಜೊತೆ ಮಾಜಿ ಕುಲಪತಿ ಅಕ್ರಮ ಸಂಬಂಧ ಹೊಂದಿದ್ದು ಮನೆಯವರಿಗೂ ಗೊತ್ತಾಗಿದೆ.. ಇದೇ ವಿಚಾರಕ್ಕೆ ಮನೆಯಲ್ಲೂ ಹಲವು ಬಾರಿ ಗಲಾಟೆ ನಡೆದಿತ್ತು.. ಪತ್ನಿಗೆ ಎಷ್ಟು ಹೇಳಿದರೂ ಅಕ್ರಮ ಸಂಬಂಧ ಬಿಡದ ಹಿನ್ನೆಲೆಯಲ್ಲಿ ಇದೀಗ ಗಂಡನೇ ಜೀವ ಬಿಟ್ಟಿದ್ದಾನೆ.

 

ಇನ್ನು ಈ ಬಗ್ಗೆ ಮಾತನಾಡಿದ ಸಂಬಂಧಿ ನಾಗರಾಜು , ಸೋಮಶೇಖರ್ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಮನನೊಂದು ಹೀಗೆ ಮಾಡಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಜೊತೆ ಆಕೆಗೆ ಸಂಬಂಧ ಇತ್ತು. ಇದೇ ವಿಚಾರವಾಗಿ ಆಗಾಗ ಗಲಾಟೆ ಆಗುತ್ತಿತ್ತು. ಆದರೂ ಸಂಬಂಧ ಬಿಡದಿರೋದ್ರಿಂದ ಸೋಮಶೇಖರ್ ಸಾವನ್ನಪ್ಪಿದ್ದಾರೆ ಅಂತ ಆರೋಪಿಸಿದ್ದಾರೆ

ಅಕ್ರಮ ಸಂಬಂಧ ಬಯಲಾದರೂ ಮಾಜಿ ಕುಲಪತಿ ಮಾತ್ರ ಪವಿತ್ರಾಳನ್ನ ಬಿಟ್ಟಿರಲಿಲ್ವಂತೆ.. ಅಲ್ದೆ ಗಂಡನನ್ನು ಬಿಟ್ಟು ಬಂದುಬಿಡು ಅಂತ ಹೇಳ್ತಿದ್ರಂತೆ.. ಇದರ ಆಡಿಯೋ ಕೂಡ ಇದೆ ಅಂತ ಸಂಬಂಧಿಕರು ಆರೋಪಿಸಿದ್ದಾರೆ.. ಪವಿತ್ರಾ ಹಾಗೂ ಸೋಮಶೇಖರ್ ಪ್ರೀತಿಸಿ ಮದುವೆ ಆಗಿದ್ರೂ ಕೂಡ ಅಕ್ರಮ ಸಂಬಂಧ ಇಟ್ಟುಕೊಂಡ ಪತ್ನಿ, ಗಂಡನ ಜೀವ ಹೋಗುವಂತೆ ಮಾಡಿದ್ದಾಳೆ.. ಹೀಗಾಗಿ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಮೃತ ಸೋಮಶೇಖರ್ ಅವರ ಭಾವ ನಾಗರಾಜ್ ಒತ್ತಾಯಿಸಿದ್ದಾರೆ

ಸದ್ಯ ಈ ಬಗ್ಗೆ ಪತ್ನಿ ಪವಿತ್ರಾ ಹಾಗೂ ಮಾಜಿ ಕುಲಪತಿ ವಿರುದ್ದ ಮೃತ ಸೋಮಶೇಖರ್ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಠಾಣೆ ಮುಂದೆ ಸೋಮಶೇಖರ್ ಕುಟುಂಬದ 30ಕ್ಕೂ ಅಧಿಕ ಜನರು ಜಮಾಯಿಸಿ ಪ್ರತಿಭಟನೆ ನಡೆಸಿದ್ರು

- Advertisement -

Latest Posts

Don't Miss