ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಹಿನ್ನೆಲೆಯಲ್ಲಿ, ಆಗಸ್ಟ್ 30 ಮತ್ತು 31ರಂದು ಬೆಂಗಳೂರಿನ ಹಲವೆಡೆ ಮದ್ಯ ಮಾರಾಟ ನಿಷೇಧಿಸಲಾಗುತ್ತಿದೆ. ನಗರ ಪೊಲೀಸ್ ಆಯುಕ್ತರಿಂದ ಈ ಆದೇಶ ಹೊರಬಿದ್ದಿದೆ.
ಬೆಂಗಳೂರು ನಾಗರಿಕರಿಗೆ ಆ.30 ಮತ್ತು 31ರಂದು ಹಲವು ಠಾಣಾ ವ್ಯಾಪ್ತಿಯಲ್ಲಿ ಬಾರ್, ಪಬ್, ವೈನ್ ಶಾಪ್‌ಗಳು ಮುಚ್ಚಲಿವೆ. ಆಹಾರ ಸೇವೆಗೆ ಮಾತ್ರ ಹೋಟೆಲ್‌ಗಳಿಗೆ ವಿನಾಯಿತಿ ಕೊಡಲಾಗಿದೆ.
ಆಗಸ್ಟ್.30 ಬೆಳಗ್ಗೆ 6ರಿಂದ ಆ.31 ಬೆಳಗ್ಗೆ 6ರವರೆಗೆ – ಆರ್‌ಟಿ ನಗರ, ಜೆ.ಸಿ. ನಗರ, ಹೆಬ್ಬಾಳ, ವಿದ್ಯಾರಣ್ಯಪುರ ಸೇರಿದಂತೆ ಹಲವು ಠಾಣೆ ಪ್ರದೇಶಗಳಲ್ಲಿ ಮದ್ಯ ಸಿಗುವುದಿಲ್ಲ. ಆ.31ರಿಂದ ಸೆಪ್ಟೆಂಬರ್ 1ರ ಬೆಳಗ್ಗೆ 6ರವರೆಗೆ – ಕೆ.ಜಿ. ಹಳ್ಳಿ, ಶಿವಾಜಿನಗರ, ಯಶವಂತಪುರ, ಜಾಲಹಳ್ಳಿ, ಹಲಸೂರು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿದೆ.
ಆ.31ರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ – ತಲಘಟ್ಟಪುರ, ಕೆಂಗೇರಿ, ಜ್ಞಾನಭಾರತಿ, ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.ಇನ್ನು ಗಣೇಶೋತ್ಸವ ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಶಾಂತಿ ಕಾಪಾಡಲು, ಮದ್ಯ ಮಾರಾಟ ನಿಷೇಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ