ಸ್ಯಾಂಕಿ ಟ್ಯಾಂಕ್ ನೀರಿಲ್ಲದೆ ಬರಿದಾಗಿದೆ. ಇಂಥ ದೃಶ್ಯ ನಾವು ನೋಡೇ ಇಲ್ಲ ಅಂತ ಸ್ಥಳೀಯರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಿಲಿಕಾನ್ ಸಿಟಿಯ ಐಕಾನಿಕ್ ಸ್ಪಾಟ್‌ಗಳಲ್ಲಿ ಒಂದಾದ ಮಲ್ಲೇಶ್ವರಂನ ಸ್ಯಾಂಕಿ ಟ್ಯಾಂಕ್ ಈಗ ಅಕ್ಷರಶಃ ಡ್ರೈ ಮೋಡ್‌ಗೆ ಹೋಗ್ತಿದೆ. ಒಂದು ಕಾಲದಲ್ಲಿ ಫುಲ್ ವಾಟರ್, ಗ್ರೀನ್ ವ್ಯೂ ಮತ್ತು ಈವ್ನಿಂಗ್ ವಾಕ್‌ಗಳಿಗೆ ಫೇವರಿಟ್ ಸ್ಪಾಟ್ ಆಗಿದ್ದ ಈ ಐತಿಹಾಸಿಕ ಕೆರೆ, ಈಗ ದಿನೇದಿನೇ ಬರಿದಾಗುತ್ತಿದೆ. ನೀರನ ಪ್ರಮಾಣ ಕಡಿಮೆಯಾಗುತ್ತಿದೆ. ನಾವು ಹುಟ್ಟಿ ಬೆಳೆದ ಮಲ್ಲೇಶ್ವರಂನಲ್ಲಿ ಸ್ಯಾಂಕಿ ಟ್ಯಾಂಕ್ ಇಷ್ಟು ಖಾಲಿ ಆಗಿರೋದನ್ನೇ ನೋಡಿಲ್ಲ. ಒಳ್ಳೆ ನೀರು, ಗಾಳಿ, ಹಸಿರು ಮನ ತಣಿಸುವ ತಂಪು ಇತ್ತು. ಇಲ್ಲಿಗೆ ಬಂದರೆ ಮನಶಾಂತಿ ದೊರೆಯುತ್ತಿತ್ತು. ಈಗ ಇದೇ ಮೊದಲ ಬಾರಿಗೆ ಸ್ಯಾಂಕಿ ನಮ್ಮ ಕಣ್ಣಲ್ಲಿ ನೀರು ತರಿಸುವಂತೆ ಬರಿದಾಗುತ್ತಿದೆ. ಅಂತ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಸಮ್ಮರ್‌ನಲ್ಲಿ ನೀರು ಕಡಿಮೆಯಾಗೋದು ಕಾಮನ್. ಆದರೆ ಈ ಬಾರಿ ಸ್ಯಾಂಕಿ ಟ್ಯಾಂಕ್‌ನ ಸ್ಥಿತಿ ನೋಡಿ ತಜ್ಞರು ಕೂಡ ಶಾಕ್ ಆಗಿದ್ದಾರೆ. WELL Labs ತಜ್ಞೆ ವೀಣಾ ಶ್ರೀನಿವಾಸನ್ ಪ್ರಕಾರ, ಇದು ಕೇವಲ ಬಿಸಿಲಿನ ಪರಿಣಾಮ ಅಲ್ಲ, ಕೆರೆಯ ಒಳಹರಿವು ಅಥವಾ ಅಡಿಯಲ್ಲೇ ಲೀಕೆಜ್ ಸಮಸ್ಯೆ ಇರಬಹುದು. ಅನ್ನೋ ಅನುಮಾನ ವ್ಯಕ್ತವಾಗಿದೆ. ಕಳೆದ ಮಳೆಗಾಲದಲ್ಲಿ ಒಳಹರಿವಿನ ಮಾರ್ಗ ಬದಲಾಗಿರೋ ಕಾರಣ ಕೆರೆಗೆ ಬರಬೇಕಾದ ನೀರು ಕಡಿಮೆ ಆಗಿರಬಹುದು. ಕೆರೆಯ ಹೊರಹರಿವಿನ ವಾಲ್ವ್ ಅಥವಾ ಅಡಿಭಾಗದಲ್ಲಿ ಕ್ರ್ಯಾಕ್ ಆಗಿ ನೀರು ಕೆಳಗಡೆಯ ಕಾಲುವೆಗೆ ಸೋರುತ್ತಿರೋ ಸಾಧ್ಯತೆ ಇದೆ. ಮಲ್ಲೇಶ್ವರಂ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿರೋದು ಕೆರೆಯ ನೀರಿನ ಮಟ್ಟಕ್ಕೂ ದೊಡ್ಡ ಹೊಡೆತ ಕೊಟ್ಟಿರಬಹುದು.
ಈ ಪರಿಸ್ಥಿತಿಯನ್ನು ಗಂಭೀರವಾಗುತ್ತಿರುವುದನ್ನ ಗಮನಿಸಿದ ‘Citizens for Sankey’ ತಂಡ ಸರ್ಕಾರಕ್ಕೆ ಪತ್ರ ಬರೆದಿದೆ. BWSSB ಆಯುಕ್ತ ರಾಜೇಂದ್ರ ಕೆ.ವಿ. ಅವರು ಕೂಡ ಈಗ IISc ತಜ್ಞರ ಸಹಾಯ ಕೇಳಿದ್ದಾರೆ. ಕೆರೆಯನ್ನು ಉಳಿಸೋಕೆ ಸುತ್ತಮುತ್ತಲಿನ ಓಪನ್ ವೆಲ್‌ಗಳ ಮ್ಯಾಪಿಂಗ್, ಒಳಹರಿವು ಪರಿಶೀಲನೆ ಮತ್ತು ಲೀಕೆಜ್ ಟೆಸ್ಟ್ ಮಾಡುವ ಪ್ಲಾನ್ ನಡೆಯುತ್ತಿದೆ. ಒಂದು ಕಾಲದಲ್ಲಿ ಬೆಂಗಳೂರಿನ ಹೆಮ್ಮೆ ಆಗಿದ್ದ ಈ ಕೆರೆ ಈಗ ಕಾಂಕ್ರೀಟ್ ಸಿಟಿಯ ಮತ್ತೊಂದು ಬರಿದಾದ ಜಾಗವಾಗುತ್ತಾ? ಸರ್ಕಾರದ ಹೊಸ ಪ್ಲ್ಯಾನ್ ಕೆಲಸ ಮಾಡಿ ಸ್ಯಾಂಕಿ ಮತ್ತೆ ಹೋಳೆಯುತ್ತಾ? ಅಂತ ಕಾದು ನೋಡಬೇಕಿದೆ.




