Tuesday, April 22, 2025

Latest Posts

Benjamin Netanyahu : ಪ್ಯಾಲೆಸ್ತೀನ್ -ಇಸ್ರೇಲ್ ನಡುವೆ ಯುದ್ಧ : ಅಖಾಡಕ್ಕಿಳಿದ ಪ್ರಧಾನಿ

- Advertisement -

International News : ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ ಸಿಬ್ಬಂದಿಯೊಂದಿಗಿನ ಸಂವಾದದ ದೃಶ್ಯಗಳನ್ನು ಇಸ್ರೇಲ್ ಪ್ರಧಾನಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಆಟ ಇನ್ನು ಮುಗಿದಿಲ್ಲ, ಅಸಲಿ ಆಟ ಇನ್ನು ಶುರು ಎನ್ನುವ ಮೂಲಕ ಸೈನಿಕರ ಜೊತೆಗಿನ ಸಂವಾದದಲ್ಲಿ ಹಮಾಸ್ ಬಂಡುಕೋರರಿಗೆ ನೆತನ್ಯಾಹು ಬಿಸಿ ಮುಟ್ಟಿಸಿದ್ದಾರೆ. ನಾವೆಲ್ಲರೂ ಸಿದ್ಧ ಎಂದು ತೀವ್ರ ಪ್ರತಿದಾಳಿಯ ಸಂದೇಶ ನೀಡಿದ್ದಾರೆ.

ಗಾಜಾಪಟ್ಟಿಯಲ್ಲಿ ಇಸ್ರೇಲ್ ಏರ್‌ಸ್ಟ್ರೈಕ್ ಮುಂದುವರೆದಿದ್ದು, ಬಾಂಬ್ ದಾಳಿಗೆ ಹಲವು ಸ್ಥಳಗಳು ಧ್ವಂಸವಾಗಿದೆ. ಜಬಾಲಿಯಾ, ಬೀಚ್ ಕ್ಯಾಂಪ್‌ನಲ್ಲಿ ಶನಿವಾರ ಇಸ್ರೇಲ್ ದಾಳಿ ನಡೆಸಿದ್ದು, ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ನೂರಾರು ಜನರು ಗಾಯಗೊಂಡಿದ್ದಾರೆ.

ಇಸ್ರೇಲ್ ಹಮಾಸ್ ಉಗ್ರರ ವಿರುದ್ಧ ಪ್ರತಿಕಾರದ ಶಪಥ ಮಾಡಿದೆ. ಉತ್ತರ ಗಾಜಾದಲ್ಲಿ ವಾಯುಸೇನೆಯಿಂದ ಏರ್‌ಸ್ಟ್ರೈಕ್ ನಡೆದ ಪರಿಣಾಮ ಅಮಾಯಕ ಜೀವಗಳು ಬಲಿಯಾಗಿವೆ. ಭೂ ಆಯ್ತು, ವಾಯುವಾಯ್ತು. ಇದೀಗ ಸಮುದ್ರ ಮಾರ್ಗದಲ್ಲೂ ಹಮಾಸ್ ಮತ್ತು ಇಸ್ರೇಲ್ ಮುಖಾಮುಖಿಯಾಗಿದ್ದು, ಇಸ್ರೇಲ್ ಗಡಿ ಪ್ರವೇಶಕ್ಕೆ ಪ್ರಯತ್ನಿಸಿದ ಹಮಾಸ್ ಮೇಲೆ ಇಸ್ರೇಲ್ ಗುಂಡಿನ ದಾಳಿ ನಡೆಸಿದೆ.

ಸಮುದ್ರದಲ್ಲಿ ಹಮಾಸ್ ಮತ್ತು ಇಸ್ರೇಲ್ ನೇರಾನೇರಾ ಕಾದಾಡಿದ್ದು, ಭೀಕರ ಕಾಳಗದ ವಿಡಿಯೋ ಮೈ ಜುಮ್ ಎನ್ನಿಸುತ್ತದೆ. ಸಮುದ್ರ ಮಾರ್ಗದ ಮೂಲಕ ದಾಳಿಗೆ ಹಮಾಸ್ ಯತ್ನಿಸಿದ್ದು, ಹಮಾಸ್ ದೋಣಿಯನ್ನೇ ಇಸ್ರೇಲ್ ನಾಶ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ಇಂತಿವೆ……………

Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!

ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂದು ಸುಳ್ಳ ಸುದ್ದಿಗೆ ಸ್ಪಷ್ಟನೆ ನೀಡಿದ ಪುತ್ರಿ ನಂದನಾ ದೇವ್ ಸೇನ್

ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ: 37 ಜನರು ಸಾವು..!

 

- Advertisement -

Latest Posts

Don't Miss