Wednesday, December 11, 2024

Latest Posts

ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂದು ಸುಳ್ಳ ಸುದ್ದಿಗೆ ಸ್ಪಷ್ಟನೆ ನೀಡಿದ ಪುತ್ರಿ ನಂದನಾ ದೇವ್ ಸೇನ್

- Advertisement -

ಅಂತರಾಷ್ಟ್ರೀಯ ಸುದ್ದಿ: ನೋಬೆಲ್ ಪ್ರಶಸ್ತಿ ವಿಜೇತ ಅಮರ್ಥ್ಯ ಸೇನ್ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೆ ಇದು ಸುಳ್ಳು ಸುದ್ದಿ ಎಂದು ಮಂಗಳವಾರ ಅವರ ಕುಟುಂಬ ಸ್ಪಷ್ಟನೆ  ನೀಡಿದ್ದಾರೆ. ನಾನು ಒಂದು ವಾರ ಕೇಂಬ್ರಿಡ್ಜ್ ನಲ್ಲಿರುವ ನಮ್ಮ ಕುಟುಂಬದೊಂದಿಗೆ ಕಾಲ ಕಳೆದಿದ್ದೇನೆ ಎಂದು ಸೇನ್ ಅವರ ಮಗಳು ತಿಳಿಸಿದ್ದಾರೆ.

ಆದರೆ ಸೇನ್ ನಿಧನದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಹಲವಾರು ಪ್ರಮುಖರು ಸಂತಾಪ ಸೂಚಿಸಿದರು. ಇನ್ನು ಈ ಸುದ್ದಿ ಕ್ಲೌಡಿಯಾ ಗೋಲ್ಡಿನ್ ಎನ್ನುವವರು ನಕಲಿ ಖಾತೆಯಿಂದ ಈ ಸುದ್ದಿ ಬಿತ್ತರವಾಗಿದೆ. ಇನ್ನು ಈ ಖಾತೆಯ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ನಲ್ಲಿ ಹಾಕಿ ಇದು ಸುಳ್ಳು ಸುದ್ದಿ ಎಂದು ರೀ ಟ್ವೀಟ್ ಮಾಡಿದ ನಂದನಾ ದೇವ್ ಸೇನ್ ಅವರು ಈ ಸುದ್ದಿಯನ್ನು ನೀರಾಕರಿಸಿದ್ದಾರೆ

ಇದು ಸುಳ್ಳು ಸುದ್ದಿ ಕೇಂಬ್ರಿಡ್ಜ್ ನಲ್ಲಿ ಅವರು ಸುಖವಾಗಿದ್ದಾರೆ. ವಾರಕ್ಕೆ ಎರಡು ಕೋರ್ಸ್ ಗಳನ್ನು ಅವರು ಕಲಿಸುತ್ತಿದ್ದಾರೆ. ಆರೋಗ್ಯವಾಗಿದ್ದಾರೆ ಎಂದು ಅರ್ಥ ಶಾಸ್ತ್ರಜ್ಞರ ಪುತ್ರಿ ನಂದನಾ ದೇವ್ ಸೇನ್ ಪಿಟಿಐಗೆ ತಿಳಿಸಿದರು. ಹಾಗೂ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ನಿಧನದ ಸುದ್ದಿಯನ್ನು ನಿರಾಕರಿಸಿ ಪೋಸ್ಟ್ ಮಾಡಿದರು.

ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ: 37 ಜನರು ಸಾವು..!

ವೀರಶೈವ ಧರ್ಮದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದ ರಷ್ಯಾ ಬಾಲಕ..!

Reliance-Apple: ಐಫೋನ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಿದೆ ರಿಲಾಯನ್ಸ್ ಜಿಯೋ..!

 

- Advertisement -

Latest Posts

Don't Miss