Thursday, September 19, 2024

Latest Posts

BESCOM : ಬೆಸ್ಕಾಂನಿಂದ ಬಿಗ್​ ಶಾಕ್ : ಹೀಗೆ ಮಾಡದಿದ್ರೆ ಕರೆಂಟ್ ಕಟ್!

- Advertisement -

ಬೆಸ್ಕಾಂ ಬೆಂಗಳೂರಿಗರಿಗೆ ಇದೀಗ ಮತ್ತೊಂದು ಶಾಕ್ ನೀಡಿದೆ. 30 ದಿನದ ಒಳಗೆ ಬಿಲ್ ಪಾವತಿಸದಿದ್ರೆ ನಿಮ್ಮ ಮನೆಯ ಕರೆಂಟ್ ಕಟ್ ಆಗಲಿದೆ. ಸದ್ಯ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಹೊಸ ನಿಯಮಕ್ಕೆ ಜನರು ತಬ್ಬಿಬ್ಬಾಗಿದ್ದಾರೆ.

ಬೆಸ್ಕಾರಂ ಸೆಪ್ಟೆಂಬರ್ 1ರಿಂದ ಹೊಸ ನಿಯಮವನ್ನ ಜಾರಿಗೊಳಿಸಲಿದೆ. ಬಾಕಿ ಇರುವ ವಿದ್ಯುತ್ ಬಿಲ್​ನ್ನು ಸರಿಯಾದ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ಕರೆಂಟ್ ಕಟ್ ಮಾಡ್ತೇವೆ ಅಂತಾ ಸೂಚನೆ ಕೊಟ್ಟಿದೆ. ಗೃಹ, ವಾಣಿಜ್ಯ ಬಳಕೆದಾರರಿಗೆ ಹಾಗೂ ಅಪಾರ್ಟ್‌ಮೆಂಟ್‌ಗಳು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸೆಪ್ಟೆಂಬರ್ 1 ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲೇ ಬೇಕು ಅಂತ ಹೇಳಿದೆ.

ಒಂದು ವೇಳೆ ನಿಗದಿತ 30 ದಿನದೊಳಗೆ ಬಿಲ್ ಪಾವತಿಸದಿದ್ರೆ, ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಟ್ ಮಾಡ್ತೇವೆ ಎಚ್ಚರಿಸಿದೆ. ಸಾಮಾನ್ಯವಾಗಿ ಬೆಸ್ಕಾಂ ಸಿಬ್ಬಂದಿ ಪ್ರತಿ ತಿಂಗಳು 1ರಿಂದ 15ರೊಳಗೆ ಭೇಟಿ ನೀಡುತ್ತಾರೆ. ಹೀಗಾಗಿನೇ ಗ್ರಾಹಕರು ಸಕಾಲದಲ್ಲಿ ಬಿಲ್ ಪಾವತಿಸ್ಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ. ಈ ಹಿಂದೆ ಲೈನ್ ಮನ್​ಗಳು, ಮೀಟರ್ ರೀಡರ್​ಗಳು ಮನೆ ಮನೆಗೆ ಹೋಗಿ ಬಿಲ್ ಕಟ್ಟದಿದ್ದವರ ವಿದ್ಯುತ್ ಸಂಪರ್ಕ ಕಟ್ ಮಾಡ್ತಾ ಇದ್ರು. ಆದ್ರೆ ಇನ್ನು ಮುಂದೆ ಮೀಟರ್ ರೀಡರ್‌ಗಳ ಜೊತೆ ಬರುವ ಲೈನ್‌ಮ್ಯಾನ್‌ಗಳು ಬಿಲ್ ಮಾಡುವ ಸಮಯದಲ್ಲಿ, ಬಿಲ್ ಪಾವತಿಸದ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸ್ತಾರಂತೆ.

ಬಡ್ಡಿ ರಹಿತವಾಗಿ ವಿದ್ಯುತ್ ಬಿಲ್ ಪಾವತಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದ್ದು, ನಿಗದಿ ಪಡಿಸಿದ ದಿನಾಂಕದ ನಂತರ ಬಡ್ಡಿ ಸಹಿತ ಹಣ ಪಾವತಿಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶವೂ ಇದೆ. ಇದನ್ನೂ ಮೀರಿ ನೀವು ಬಿಲ್‌ ಪಾವತಿಸದಿದ್ದರೆ, ಮುಂದಿನ ಸಲ ನಿಮ್ಮ ಮನೆಗೆ ಮೀಟರ್ ರೀಡಿಂಗ್ ಬರುವ ದಿನದಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಬಾಕಿ ಮೊತ್ತವು ಹೆಚ್ಚುವರಿ ಭದ್ರತಾ ಠೇವಣಿ ಸೇರಿದಂತೆ 100 ರೂಪಾಯಿಗಿಂತ ಹೆಚ್ಚು ಮೀರಿದರೆ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಟ್‌ ಮಾಡುವುದು ಗ್ಯಾರಂಟಿ ಎಂದು ಬೆಸ್ಕಾಂ ತಿಳಿಸಿದೆ.ಒಟ್ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಅನ್ನೋ ಭಯದಲ್ಲಿ ಆದ್ರೂ ಗ್ರಾಹಕರು ಬೇಗನೇ ಬಿಲ್ ಕಟ್ಟಲಿ ಅನ್ನೋದು ಇದರ ಉದ್ದೇಶವಾಗಿದೆ.

- Advertisement -

Latest Posts

Don't Miss