Sunday, December 1, 2024

Latest Posts

Cake :ರಾಜ್ಯದಲ್ಲಿ ಕೇಕ್ ಬ್ಯಾನ್?

- Advertisement -

ಕೇಕ್ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ.. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಕೇಕ್​ನ್ನು ಚಪ್ಪರಿಸಿಕೊಂಡು ತಿಂತಾರೆ. ಅದರಲ್ಲೂ ಈಗಂತೂ ಕೇಕ್ ಇಲ್ದೆ ಹೋದ್ರೆ ಬರ್ತೇಡೆ ಪಾರ್ಟಿಗಳನ್ನ ಊಹಿಸೋದು ಕೂಡ ಕಷ್ಟ. ಅಂತದ್ರಲ್ಲಿ ಇನ್ಮಂದೇ ಕರ್ನಾಟಕದಲ್ಲಿ ಕೇಕ್ ಸಿಗೋದಿಲ್ವಾ? ರಾಜ್ಯದಲ್ಲಿ ಕೇಕ್ ಬ್ಯಾನ್ ಆಗುತ್ತಾ?

ಕಣ್ಣಿನ ಜೊತೆಗೆ ಮನಸ್ಸಿಗೂ ಉಲ್ಲಾಸ ಕೊಡುವ ಆಹಾರ ಅಂದ್ರೆ ಅದು ಕೇಕ್.. ಕೇಕ್ ಅನ್ನೋ ಒಂದು ಹೆಸ್ರು ಸಾಕು ಹಲವರ ಮುಖದಲ್ಲಿ ಸ್ಮೈಲ್ ಮೂಡುತ್ತೆ. ಸದ್ಯ ಈಗಂತೂ ಕೇಕ್ ಇಲ್ದೆ ಫಕ್ಷನ್​​ಗಳು ಇನ್ ಕಪ್ಲೀಟ್ ಅನ್ನೋ ಭಾವನೆ ಇದೆ. ಅಚ್ಚರಿಯ ವಿಷ್ಯ ಅಂದ್ರೆ ಈಗಾಗಲೇ ಗೋಬಿ, ಕಬಾಬ್, ಬಾಂಬೆ ಮಿಠಾಯಿಗಳಿಗೆ ರಾಜ್ಯದಲ್ಲಿ ವಿಘ್ನ ಎದುರಾಗಿತ್ತು. ಅದ್ರೆ ಇದೀಗ ಕೇಕ್​ಗೂ ಸಹ ಸಂಕಷ್ಟ ಎದುರಾಗಿದೆ. ಕೇಕ್​ನಲ್ಲಿ ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುವ ಕೆಮಿಕಲ್ಸ್ ಪತ್ತೆಯಾಗಿದೆ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಇಂತಹದ್ದೊಂದು ಆಘಾತಕಾರಿ ವಿಷ್ಯವೊಂದನ್ನ ಆಹಾರ ಮತ್ತು ಆರೋಗ್ಯ ತಜ್ಞರು ಪತ್ತೆ ಹಚ್ಚಿದ್ದಾರೆ. ವಿಶೇಷ ಅಂದ್ರೆ ಬಾಂಬೆ ಮಿಠಾಯಿಯಲ್ಲಿ ರೋಡಮೈನ್-ಬಿ ಎಂಬ ವಿಷಕಾರಿ ರಾಸಾಯನಿಕ ಅಂಶ ಇದ್ಯಂತೆ. ಅದಲ್ಲದೆ ಗೋಬಿ ತಯಾರಿಕೆಯಲ್ಲಿ ಬಳಸುವ ಕೃತಕ ಬಣ್ಣ, ರುಚಿಕಾರಕ, ಕಡಿಮೆ ಬೆಲೆಯ ಸಾಸ್ ಇವೆಲ್ಲಾ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬ ಮಾಹಿತಿ ನೀಡಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಇದ್ರಲೆಲ್ಲ ಸಿಂಥೆಟಿಕ್ ಬಣ್ಣಗಳನ್ನು ಅತಿ ಹೆಚ್ಚು ಬಳಸಾಗುತ್ತೆ. ಅದರಲ್ಲೂ ಸಾಸ್​​ಗಳಲ್ಲಿ ನಾನಾ ಕೆಮಿಕಲ್​ಗಳು ಇವೆ. ಇದನ್ನ ಬಟ್ಟೆ ಒಗೆಯಲು ಬಳಸುವ ಪೌಡರ್​ಗೆ ಬಳಸಾಗುತ್ತಂತೆ. ಹೀಗಾಗಿನೇ ಇದನ್ನು ತಿಂದವರಿಗೆ ರೋಗಗಳು ಹೆಚ್ಚಾಗಿ ಬರುತ್ತೆ ಎಂಬ ಆತಂಕಕಾರಿ ವರದಿಯನ್ನ ಆರೋಗ್ಯ ಮತ್ತು ಆಹಾರ ತಜ್ಞರು ಬಹಿರಂಗಪಡಿಸಿದ್ದಾರೆ.

ಸದ್ಯ ಇದೀಗ ಕೇಕ್‌ಗಳ ಸರದಿ.. ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಕೆಮಿಕಲ್, ಫ್ಲೇವರ್‌ಗಳು ಹಾಗೂ ಕಲರ್‌ಗಳು ಆರೋಗ್ಯಕ್ಕೆ ಹಾನಿ ಎನ್ನಲಾಗ್ತಾ ಇದೆ. ಹಾಗೂ ಇವುಗಳನ್ನು ಪರಿಶೀಲನೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಕೇಕ್​ಗಳು ಆಕರ್ಷಕವಾಗಿ ಕಾಣ್ಬೇಕು ಹಾಗೂ ತುಂಬಾ ಸಮಯ ಹಾಳಾಗದಂತೆ ಇರ್ಬೇಕು ಅನ್ನೋ ಕಾರಣಕ್ಕೆ ಬಳಸಲಾಗ್ತಾಯಿರುವ ಕಲರ್, ಟೇಸ್ಟಿಂಗ್ ಪೌಡರ್​ಗಳು ಆರೋಗ್ಯಕ್ಕೆ ಮಾರಕವಾಗಿದೆ. ಹೀಗಾಗಿನೆ ಆ ಬಣ್ಣಗಳನ್ನು ನಿಷೇಧಿಸಬೇಕು ಅಂತಾ ಆಹಾರ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಜನರು ಹೆಚ್ಚಾಗಿ ಇಷ್ಟ ಪಡುವ ಹನಿ, ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಫ್ಲೇವರ್​ಗಳ ತಯಾರಿಕೆಯಲ್ಲಿ ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಲಾಗ್ತಾಯಿರುವ ಕೆಮಿಕಲ್ ಗಳು ಜನರ ಆರೋಗ್ಯಕ್ಕೆ ಹಾನಿಯಾಗುತ್ತೋ ಇಲ್ವೋ ಅನ್ನೋದನ್ನ ಕಾದು ನೋಡ್ಬೇಕಿದೆ..

 

 

- Advertisement -

Latest Posts

Don't Miss