OTT Movie review: ಓಟಿಟಿಯಲ್ಲಿ ಇತ್ತೀಚಿಗೆ ರಿಲೀಸ್ ಆಗಿರುವ ಉತ್ತಮ ಚಿತ್ರ ಅಂದ್ರೆ ಮಲಯಾಳಂನ ಬೆತ್ಲ್ಹೆಮ್ ಕುಡುಂಬ ಯುನಿಟ್ ಅನ್ನೋ ಸಿನಿಮಾ.
ನಿವೀನ್ ಪೌಲಿ, ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದ್ದು, ಕ್ಯೂಟ್ ಪ್ರೇಮ್ ಕಹಾನಿ ಇದಾಗಿದೆ.
ಜಸ್ಟೀನ್ ಎಂಬ ಪಾತ್ರಕ್ಕೆ ನಿವೀನ್ ಬಣ್ಣ ಹಚ್ಚಿದ್ರೆ ಆ್ಯಶ್ಲಿನ್ ಎಂಬ ಪಾತ್ರದಲ್ಲಿ ಮಮಿತಾ ನಟಿಸಿದ್ದಾರೆ. ಆ್ಯಶ್ಲೀನ್ ಅಪ್ಪ ಕುಡಿದು ಎಲ್ಲರ ಬಳಿ ಸಾಲ ಮಾಡಿ, ಊರು ಬಿಟ್ಟು ಬೇರೆ ಊರಿಗೆ ಬಂದು ಸೇರುತ್ತಾನೆ. ಆ ಊರಿನಲ್ಲಿ ಆ್ಯಶ್ಲಿನ್ಗೆ ಸಿಗುವ ಎದುರು ಮನೆಯ ಹುಡುಗನೇ ಜಸ್ಟಿನ್.
ಆ್ಯಶ್ಲಿನ್ಗಿಂತ 10 ವರ್ಷ ಹಿರಿಯನಾಗಿದ್ದ ಜಸ್ಟಿನ್ ಮೇಲೆ ಆ್ಯಶ್ಲಿನ್ಗೆ ಲವ್ ಆಗುತ್ತದೆ. ಮುಂದೆ ಮನೆಯವರ ವಿರೋಧವೂ ಆಗುತ್ತದೆ. ಹಾಗಾದ್ರೆ ಅವ್ರಿಬ್ಬರು ತಮ್ಮ ಪ್ರೀತಿಯನ್ನು ಮನೆಯಲ್ಲಿ ಹೇಗೆ ಹೇಳುತ್ತಾರೆ. ಮುಂದೆ ಏನಾಗುತ್ತದೆ ಅಂತಾ ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಈ ಸಿನಿಮಾದ ಸಂಭಾಷಣೆ ಹಾಸ್ಯಭರಿತವಾಗಿದ್ದು, ಲವ್ ಸ್ಟೋರಿ ಜತೆಗೆ ಕಾಮಿಡಿ ಸನ್ನಿವೇಶಗಳನ್ನು ಕೂಡಾ ನೀವು ಈ ಸಿನಿಮಾದಲ್ಲಿ ನೋಡ್ಬಹುದು. ಜೀಯೋ ಹಾಟ್ಸ್ಟಾಾರ್ನಲ್ಲಿ ಈ ಸಿನಿಮಾ ಲಭ್ಯವಿದ್ದು, ಇಂಥದ್ದೇ ಇನ್ನಷ್ಟು ಸಿನಿಮಾ ಸುದ್ದಿಯ“ಂದಿಗೆ ಮುಂದಿನ ವೀಡಿಯೋದಲ್ಲಿ ಭೇಟಿಯಾಗೋಣ ನಮಸ್ಕಾರ.




