Friday, November 22, 2024

Latest Posts

ಫಿಂಗರ್ ಪ್ರಿಟ್ ಕಳ್ಳರಿಂದ ಎಚ್ಚರ..!

- Advertisement -

ಪ್ರತಿಯೊಬ್ಬ ವ್ಯಕ್ತಿಯ ಬೆರಳಚ್ಚು ಕೂಡ ವಿಶಿಷ್ಟವಾಗಿರುವ ಕಾರಣ, ಅದನ್ನು ನಕಲು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂವ ಮಾಹಿತಿ ಇದೆ. ಇದೇ ಕಾರಣಕ್ಕಾಗಿ ನಾವೆಲ್ಲರೂ ನಮ್ಮ ಬ್ಯಾಂಕ್ ಖಾತೆಗಳು, ಡಿವೈಸ್ ಗಳು ಹಾಗೂ ಇತರೆ ಸೂಕ್ಷ್ಮ ದಾಖಲೆಗಳ ರಕ್ಷಣೆಗೆ ‘ಫಿಂಗರ್ ಪ್ರಿಂಟ್’ ಗಳನ್ನೇ ಬಳಸುತ್ತೇವೆ. ಆದರೆ ನಮ್ಮ ಫಿಂಗರ್ ಪ್ರಿಂಟ್ ಗಳನ್ನು ಕಳ್ಳರು ಕದ್ದುಬಿಟ್ಟರೆ?

ಹೌದು ಇದು ಕೂಡ ಸಾಧ್ಯ ಎಂಬುದನ್ನು ಕಳ್ಳರು ಸಾಬೀತುಪಡಿಸಿದ್ದಾರೆ. ನಿಮ್ಮ ಗುರುತನ್ನೇ ಕದ್ದು, ನಿಮ್ಮ ಹೆಸರಲ್ಲೇ ಬ್ಯಾಂಕ್ ಖಾತೆಗಳನ್ನು ತೆರೆದು, ಹೊಸ ರೀತಿಯಲ್ಲಿ ವಂಚಿಸುವ ಜಾಲವೊಂದು ನಮ್ಮ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಇಂತಹ ವಂಚಕನೊಬ್ಬ ಸಿಕ್ಕಿಬಿದ್ದಿದ್ದು, ಅವನ ಕೈಯಲ್ಲಿದ್ದ 2 ಸಾವಿರ ಬೆರಳಚ್ಚುಗಳನ್ನು ನೋಡಿ ಹೈದರಾಬಾದ್ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಬೇರೆ ಬೇರೆ ವ್ಯಕ್ತಿಗಳ ಸುಮಾರು 2 ಸಾವಿರದಷ್ಟು ಬೆರಳಚ್ಚುಗಳನ್ನು ಈತ ಇನ್ನೊಬ್ಬನಿಂದ ಹಣ ಕೊಟ್ಟು ಖರೀದಿಸಿದ್ದ. ಆದರೆ, ಅವನ ಕೈಗೆ ಇಷ್ಟೊಂದು ಜನರ ಫಿಂಗರ್ ಪ್ರಿಂಟ್ ಸಿಕ್ಕಿದ್ದಾದರೂ ಎಲ್ಲಿಂದ ಎಂಬ ಮಾಹಿತಿ ಮಾತ್ರ ಗೊತ್ತಿಲ್ಲ.

ಆ ಫಿಂಗರ್ ಪ್ರಿಂಟ್ ಗಳನ್ನು ಬಳಸಿಕೊಂಡು, ನಕಲಿ ಗುರುತನ್ನು ಸೃಷ್ಟಿಸಿ ವಂಚಿಸುವುದು ಈತನ ಕೆಲಸ. ನಮ್ಮ ಕೈಗೆ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ. ಈ ರೀತಿ ವ್ಯಕ್ತಿಗಳ ಡಿಜಿಟಲ್ ಐಡಂಟಿಟಿಯನ್ನು ಕದ್ದು ಮಾಡುವ ಎಷ್ಟೋ ಮಂದಿ ಇರಬಹುದು. ಅವರ ಬಗ್ಗೆ ಅಚ್ಚರಿಕೆಯಿಂದಿರಿ ಎಂದು ನಾಗರಿಕರಿಗೆ ಸೈಬರ್ ಕ್ರೈಂ ಪೊಲೀಸರು ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss