ಬಿಡುಗಡೆಗೂ ಪೂರ್ವದಲ್ಲೇ ತೆಲುಗು, ತಮಿಳಿಗೆ ಭಾರಿ ಮೊತ್ತಕ್ಕೆ ಮಾರಾಟವಾದ ರಾಮ್ ತೇಜ್ ನಿರ್ದೇಶನದ “ಭೈರವ”..!
ವಿಸೀಕಾ ಪಿಲಂಸ್ ಸಂಸ್ಥೆಯಡಿಯಲ್ಲಿ ನಿರ್ಮಾಣವಾಗಿರುವ “ಭೈರವ” ಚಿತ್ರ ಮೇಕಿಂಗ್ ನಿಂದಲೆ ಸದ್ದು ಮಾಡಿದೆ. ಚಿತ್ರೀಕರಣ ಮುಕ್ತಾಯವಾಗಿದ್ದು, ಹಿನ್ನೆಲೆ ಸಂಗೀತದಿಂದ “ಭೈರವ” ಸಿಂಗಾರವಾಗುತ್ತಿದ್ದಾನೆ. ರಾಮ್ ತೇಜ್ ನಿರ್ದೇಶನದ ಈ ಚಿತ್ರ ತೆರೆಗೆ ಬರುವ ಮೊದಲೆ ಪ್ರಸಿದ್ದವಾಗುತ್ತಿದೆ. “ಭೈರವ” ಚಿತ್ರದ
ತಮಿಳು, ತೆಲುಗು ಹಕ್ಕುಗಳನ್ನು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ.
ನಮ್ಮ ಭೈರವ ಚಿತ್ರ ತೆಲುಗು, ತಮಿಳು ಹಕ್ಕುಗಳನ್ನು ಒಳ್ಳೆಯ ಮೊತ್ತಕ್ಕೆ ಮಾರಾಟ ಮಾಡಿದ್ದೇವೆ. ಇದಕ್ಕೆ ಕಾರಣವೆಂದರೆ ನಮ್ಮ ಚಿತ್ರದ ವಿಭಿನ್ನ ಕಥೆ , ಉನ್ನತ ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಉತ್ತಮ ಅಭಿನಯ ಈ ಫಲಿತಾಂಶಕ್ಕೆ ಕಾರಣವಾಗಿದೆ. ಸದ್ಯ ಮುಂಬೈನಲ್ಲಿ ಬಾಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಬಾಪಿ ಟುಟುಲ್ ಅವರು ಹಿನ್ನೆಲೆ ಸಂಗೀತ ಅಳವಡಿಸುತ್ತಿದ್ದಾರೆ ಮತ್ತು ರೀರೆಕಾರ್ಡಿಂಗ್ ಸಮಯದಲ್ಲಿ ಚಿತ್ರ ವೀಕ್ಷಿಸಿರುವ ಬಾಲಿವುಡ್ ತಂತ್ರಜ್ಞರು ವಿಭಿನ ಕಥೆಯುಳ್ಳ ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ನಿರ್ದೇಶಕ ರಾಮತೇಜ್ ತಿಳಿಸಿದ್ದಾರೆ.
ವಿಸಿಕಾ ಫಿಲಂಸ್ ಸಂಸ್ಥೆ ಯಡಿಯಲ್ಲಿ ನಿರ್ಮಾಣವಾಗುತ್ತಿರುವ “ಭೈರವ” ಚಿತ್ರಕ್ಕೆ ಚರಣ್ ಸುವರ್ಣ ಕಥೆ ಬರೆದಿದ್ದಾರೆ. ಹನಿ ಚೌಧರಿ ಹಾಗೂ ವೈಭವ್ ಬಜಾಜ್ ನಿರ್ಮಾಣದ ಮಾಡಿದ್ದಾರೆ. ಶ್ರೀನಿವಾಸ ಸಿ.ವಿ ಈ ಚಿತ್ರದ ಸಹ ನಿರ್ಮಾಪಕರು.”ಕಮರೊಟ್ಟು ಚೆಕ್ ಪೋಸ್ಟ್” ಖ್ಯಾತಿಯ ಸನತ್ , ಶೈಲಜಾ ಮುಲ್ಕಿ, ಉಮೇಶ್ ಸಕ್ಕರೆನಾಡು, ಬಾಲಿವುಡ್ ನ ನಟಿ ನಜ್ನಿಂ ಪಟ್ನಿ ಸೇರಿದಂತೆ ಹಲವು ಕಲಾವಿದರ ದಂಡೆ ಈ ಚಿತ್ರದಲ್ಲಿದೆ.ಸುದೀಪ್ ಫೆಡ್ರಿಕ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಆರ್.ಲಿಂಗರಾಜು ಅವರ ಸಂಕಲನವಿದೆ.
ಕರ್ನಾಟಕ ನ್ಯೂಸ್