ಸಿನಿಮಾ ಸುದ್ದಿ: ಚೇತನ್ ಕೃಷ್ಣ ಸಂಗೀತ ಹೊಂದಿರುವ “ಹೇ ಮಂದಾರ” ಹಾಡಿಗೆ ಅಜಯ್ ವಾರಿಯರ್ ಧ್ವನಿಯಾಗಿದ್ದಾರೆ. ಉತ್ತರ ಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಹಾಡಿಗೆ ಬಿ. ಧನಂಜಯ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ
ವಿಸಿಕ ಫಿಲಂಸ್ ಹಾಗೂ ಹನಿ ಚೌದ್ರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಹಾಗೂ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿರುವ “ಭೈರವ” ಚಿತ್ರ ಇದೀಗ ತಮ್ಮ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಸಿನಿ ರಸಿಕರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ.
ಭೈರವ ಚಿತ್ರಕ್ಕೆ ವಿಸಿಕ ಫಿಲಂಸ್ ಹಾಗೂ ಹನಿ ಚೌದ್ರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹನಿ ಚೌದ್ರಿ ಹಾಗೂ ಶ್ರೀನಿವಾಸ್ ಭೆಟ್ಟದಪುರ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ಸುವರ್ಣ ರವರು ಬರೆದಿರುವ ಕಥೆಗೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ರಾಮ್ ತೇಜ ಅವರು ವಹಿಸಿದ್ದಾರೆ. ಚಿತ್ರದ ಮುಖ್ಯ ಭೂಮಿಯಲ್ಲಿ “ಕಮರೊಟ್ಟು ಚೆಕ್ ಪೋಸ್ಟ್” ಖ್ಯಾತಿಯ ಸನತ್, ಒಂದು ಮೊಟ್ಟೆಯ ಕಥೆ ಖ್ಯಾತಿಯ ಶೈಲಾಶ್ರೀ ಮುಲ್ಕಿ ಹಾಗೂ “ಬನ್- ಟಿ” ಖ್ಯಾತಿಯ ಉಮೇಶ್ ಸಕ್ಕರೆನಾಡು ಹಾಗು ಇನ್ನೂ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಉತ್ತರ ಪ್ರದೇಶದ ಗೋವಿಂದಪುರಿ, ಹರಿದ್ವಾರ, ರಿಷಿಕೇಶ್, ಕಾಶಿ, ಬೆಂಗಳೂರು ಇನ್ನು ಹಲವು ವಿಭಿನ್ನ ಸ್ಥಳಗಳಲ್ಲಿ ಚಿತ್ರವು ಚಿತ್ರೀಕರಣ ಗೊಂಡಿದೆ ಎಂದು ಚಿತ್ರದ ನಿರ್ದೇಶಕ ರಾಮ್ ತೇಜ ರವರು ಹೇಳಿದ್ದಾರೆ. ಚಿತ್ರದ ಕಥೆಯನ್ನು ಎಲ್ಲೂ ಬಿಟ್ಟುಕೊಡದೆ ಚಿತ್ರದ ಬಗ್ಗೆ ಕುತೂಹಲವನ್ನು ಹಾಗೆ ಕಾಯ್ದಿರಿಸಿದ್ದಾರೆ. ಸದ್ಯ ಈ ಚಿತ್ರದ ಮೊದಲ ಹಾಡನ್ನು ಖ್ಯಾತ ನಿರ್ದೇಶಕರುಗಳಾದ ದಿನಕರ್ ತೂಗುದೀಪ್, ಭರ್ಜರಿ ಚೇತನ್ ಕುಮಾರ್, ಹಾಗೂ ಗರಡಿ ಚಿತ್ರದ ನಾಯಕರಾದ ಸೂರ್ಯ, ವಸಿಷ್ಠ ಸಿಂಹ ಹಾಗೂ ವಿಕ್ರಂ ರವಿಚಂದ್ರನ್, ಜಾಯಿದ್ ಖಾನ್, ಸೋನಲ್ ಮಾಂತೇರೋ, ಧರ್ಮಣ್ಣ ಕಡೂರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ ಹಾಗು ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಬರಲು ” “ಭೈರವ” ಸಜ್ಜಾಗಿದೆ.
“ಗರಡಿ” ಟೈಟಲ್ ಟ್ರ್ಯಾಕ್‌ಗೆ ಅಭಿಮಾನಿಗಳು ಫಿದಾ ;ನವೆಂಬರ್ 10ಕ್ಕೆ ಬಿಡುಗಡೆ..!
ಜನಮೆಚ್ಚುಗೆ ಪಡೆಯುತ್ತಿದೆ “ಜಲಪಾತ” ಟ್ರೇಲರ್; ಚಿತ್ರ ಅಕ್ಟೋಬರ್ 6ರಂದು ತೆರೆಗೆ..!
Yash : ಯಶ್ 19 ಚಿತ್ರದ ಅಪ್ಡೇಟ್ ಗಾಗಿ ಗಣೆಶನ ಮೊರೆ ಹೋದ ಅಭಿಮಾನಿಗಳು..!