Film News : ‘KGF’-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಆದರೂ ಯಶ್ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಅನ್ನುವ ಸುಳಿವು ಸಿಕ್ಕಿಲ್ಲ. ಒಟ್ನಲ್ಲಿ ದೊಡ್ಡದಾಗಿ ಏನೋ ಪ್ಲ್ಯಾನ್ ಮಾಡ್ತಿದ್ದಾರೆ ಅನ್ನೋದು ಮಾತ್ರ ಗೊತ್ತಾಗ್ತಿದೆ. ‘KGF’ ಸರಣಿ ಬ್ಲಾಕ್ ಬಸ್ಟರ್ ಬಳಿಕ ಯಶ್ ಕತೆ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿದೆ.
ಸ್ಟಾರ್ ನಟರು ಒಂದು ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಲೈನಪ್ ಮಾಡಿಕೊಳ್ಳುತ್ತಾರೆ. ಆದರೆ ಯಶ್ ಯಾಕೆ ಇಷ್ಟೊಂದು ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ಗಣೇಶ ಹಬ್ಬಕ್ಕೆ ಯಶ್ ಸಿಹಿಸುದ್ದಿ ಕೊಡ್ತಾರೆ ಅಂದುಕೊಂಡವರಿಗೆ ನಿರಾಸೆಯಾಗಿದೆ.
ಅಭಿಮಾನಿಗಳು ಯಶ್19 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ‘ಯಶ್ ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟ್ ಕೂಡ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಗಣೇಶನಿಗೆ ಪೂಜೆ ಸಲ್ಲಿಸಿ ಯಶ್19 ಅಪ್‌ಡೇಟ್ ಕೊಡ್ಸಪ್ಪ ಎಂದು ಪ್ರಾರ್ಥಿಸಿದ್ದಾರೆ. ಬಾಗಲಕೋಟೆಯಲ್ಲಿನ ಅಭಿಮಾನಿಗಳ ಸಂಘವೊಂದು ಬೇಗ ಯಶ್19 ಅನೌನ್ಸ್‌ಮೆಂಟ್ ಆಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದೆ. ‘ಪ್ಲೀಸ್ ಅನೌನ್ಸ್ ಯಶ್19’ ಎನ್ನುವ ಬ್ಯಾನರ್ ಗಣೇಶನ ಮುಂದೆ ಹಿಡಿದು ಅಭಿಮಾನಿಗಳು ಪೋಸ್ ನೀಡಿದ್ದಾರೆ. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆ ಮೂಲಕ ತಮ್ಮ ಬೇಡಿಕೆ ಇಟ್ಟಿದ್ದಾರೆ. ಸದ್ಯ ಈ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
“ದ ಜಡ್ಜ್ ಮೆಂಟ್” ಚಿತ್ರದಲ್ಲಿ ಕ್ರೆಜಿಸ್ಟಾರ್ ರವಿಚಂದ್ರನ್: ಅದ್ದೂರಿ ಕ್ಲೈಮ್ಯಾಕ್ಸ್
ಕಾಟೇರ ಶೂಟಿಂಗ್ಗೆ ಬ್ರೇಕ್.. ಮಹಾರಾಷ್ಟ್ರಕ್ಕೆ ಹೋಗಿದ್ಯಾಕೆ ಡಿ ಬಾಸ್..?
ದುಬೈನಲ್ಲಿ ಜೂ.ಎನ್ಟಿಆರ್ ನಟ ರಿಷಬ್ ಶೆಟ್ಟಿಗೆ ಏನ್ ಹೇಳಿದ್ರು ಗೊತ್ತಾ..?