Thursday, April 17, 2025

Latest Posts

ಕಾಂಗ್ರೆಸ್ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಆಕ್ರೋಶ

- Advertisement -

ರಾಜಕೀಯ ಸುದ್ದಿ:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಜಾರಿಗೆ ಕುರಿತು ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಆಕ್ರೋಶಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಗೆ ಆಗ್ರಹಿಸಿ ಕರ್ನಾಟಕ ಬಿಜೆಪಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಭಾಗಿಯಾಗಿದ್ರು.

ಈ ವೇಳೆ ಮಾತ್ನಾಡಿದ ಧೀರಜ್ ಮುನಿರಾಜು, ಕಾಂಗ್ರೆಸ್ ಅಧಿಕಾರಕ್ಕೆ ಬರಲು 5 ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿತ್ತು. ಇದೀಗ ಅಧಿಕಾರಕ್ಕೆ ಬಂದ ಮೇಲೆ, ಯಾವ ಯೋಜನೆಯನ್ನೂ ಸರಿಯಾಗಿ ಜಾರಿ ಮಾಡ್ತಿಲ್ಲ. ಕರ್ನಾಟಕ ಜನರನ್ನ ಕಾಂಗ್ರೆಸ್ ವಂಚಿಸಿ, ಮೋಸ ಹಾಗೂ ದ್ರೋಹ ಮಾಡಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.

ಕಾಂಗ್ರೆಸ್ ವಂಚನೆ ವಿರುದ್ಧ ಬಿಜೆಪಿ ಹೋರಾಟ ಮಾಡಿ ಜನರಿಗೆ ನ್ಯಾಯ ದೊರಕಿಸಿಕೊಡಲಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದ್ರು. ಫ್ರೀಡಂಪಾರ್ಕ್​ ನಲ್ಲಿ ನಡೆದ ಪ್ರತಿಭಟನೆ ನೇತೃತ್ವವನ್ನ ಮಾಜಿ ಸಿಎಂ ಯಡಿಯೂರಪ್ಪ ವಹಿಸಿದ್ರೆ, ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ರು.

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಎತ್ತುಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡ ಯುವ ರೈತ

ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ವರುಣಾರ್ಭಟ

- Advertisement -

Latest Posts

Don't Miss