ಬೆಂಗಳೂರು: ತುಮಕೂರು ಲೋಕಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿರೋ ಮಾಜಿ ಪ್ರಧಾನಿ ದೇವೇಗೌಡರನ್ನು ಸೊಸೆ ಭವಾನಿ ರೇವಣ್ಣ ಭೇಟಿ ಮಾಡಿ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ಎಚ್ಡಿಡಿ ನಿವಾಸದಲ್ಲಿ ಮಾವ ದೇವೇಗೌಡರನ್ನು ಪತಿ ರೇವಣ್ಣ ಜೊತೆ ಭೇಟಿ ಮಾಡಿದ ಭವಾನಿ ರೇವಣ್ಣ ನಾವು ತುಮಕೂರಿನಲ್ಲಿ ನಿಮ್ಮ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಆದ್ರೆ ಹಾಸನದಲ್ಲಿ ನಾವು ನಿರೀಕ್ಷೆ ಮಾಡಿದಂತೆ ಫಲಿತಾಂಶ ಬಂದಿದೆ. ನಿಮ್ಮ ಸೋಲು ಅರಗಿಸಿಕೊಳ್ಳುವ ಶಕ್ತಿ ನಮಗಿಲ್ಲ ಅಂತ ಭವಾನಿ ರೇವಣ್ಣ ಕಣ್ಣೀರಿಡುತ್ತಲೇ ದೇವೇಗೌಡರೊಂದಿಗೆ ಮಾತನಾಡಿದರು.
ಹಾಸನದಿಂದ ಮತ್ತೆ ನೀವು ಸ್ಪರ್ಧಿಸಲೇಬೇಕು
ದೇವೇಗೌಡರ ಜೊತೆ ಮಾತನಾಡುತ್ತಾ ಭವಾನಿ ರೇವಣ್ಣ ಮತ್ತೆ ನೀವು ಹಾಸನದಿಂದ ಸ್ಪರ್ಧೆ ಮಾಡಬೇಕು. ಹಾಸನದಲ್ಲಿ ಗೆದ್ದಿರೋ ಮಗ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡ್ತಾರೆ. ಇದನ್ನು ನೀವು ಯಾವುದೇ ಕಾರಣಕ್ಕೂ ನಿರಾಕರಿಸಬೇಡಿ ಅಂತ ಭವಾನಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವೆಗೌಡರು, ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಇದಕ್ಕೆಲ್ಲಾ ಎದುಗುಂದಬಾರದು ಅಂತ ಸೊಸೆ ಭವಾನಿಗೆ ಸಮಾಧಾನ ಹೇಳಿದರು.