www.karnatakatv.net :ರಾಯಚೂರು : ದೆಹಲಿಯ ಪೊಲೀಸ್ ಅಧಿಕಾರಿ ರಾಬಿಯಾ ಸೈಫಿ ಮೇಲಿನ ಅತ್ಯಾಚಾರ ಹಾಗೂ ಹೈದ್ರಾಬಾದ್ ನಲ್ಲಿಆರು ವರ್ಷ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಅರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಸಂಘನೆಯ ನೇತೃತ್ವದಲ್ಲಿ ಮಹಿಳೆಯರು, ವಿವಿಧ ದಲಿತಪರ ಸಂಘನೆಗಳ ಮುಖಂಡರು ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ರಾಯಚೂರಿನ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಟಿಪ್ಪುಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಹಗ್ಗ ಪ್ರದರ್ಶಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅನಂತರ ಈ ಕುರಿತು ಜಿಲ್ಲಾಡಳಿತದ ಮೂಲಕ ರಾಷ್ಟ್ರ ಪತಿಗೆ ಮನವಿ ಸಲ್ಲಿಸಿದರು.
ರಾಬಿಯಾ ಸೈಫಿ ಅವರನ್ನು ಮೇಲಾಧಿಕಾರಿಗಳ ಭ್ರಷ್ಠಾಚಾರ ಮುಚ್ಚಿ ಹಾಕಲು ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಾಂಬೆಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಮಹಿಳೆ ಸಾವನ್ನಪ್ಪಿದ್ದಾಳೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಲಾಗಿದೆ. ಇವೆಲ್ಲಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಗಳು. ರಾಬಿಯ ಸೈಫಿಯಂತಹ ಪೊಲೀಸ್ ಅಧಿಕಾರಿಗೆ ರಕ್ಷಣೆ ಇಲ್ಲದಿರುವಾಗ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದರು. ಇಂತಹ ಪ್ರಕರಣಗಳು ಮಹಿಳೆಯರಿಗೆ ಮತ್ತಷ್ಟು ಅಭದ್ರತೆಗೆ ದೂಡಿವೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲತೆಯ ದೃಶ್ಯಗಳು, ಚಿತ್ರಗಳು ಮದ್ಯ ಹಾಗೂ ಮಾದಕ ವಸ್ತುಗಳು, ಹಲ್ಲೆ ಲೀಚಿಂಗ್ ಪ್ರಸಾರ ನಿಷೇಧಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕಾನೂನು ರಚಿಸಬೇಕು. ಶಾಲಾಹಂತದಲ್ಲಿಯೇ ವಿದ್ಯಾರ್ಥಿನಿಯರ ಆತ್ಮ ರಕ್ಷಣೆಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು