ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಹವಾ ಮತ್ತೆ ಶುರುವಾಗಿದೆ. ಸೀಸನ್ 12ರ ಬಿಗ್ ಬಾಸ್ ಶೋಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮನೆ ಮಾತಾಗಿದ್ದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ನಾಯಕಿ, ನಟಿ ಭೂಮಿಕಾ ರಮೇಶ್ ಬಿಗ್ ಬಾಸ್ ಮನೆಗೆ ಕಾಲಿಡ್ತಾರಾ ಎಂಬುದರ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಾಯಿದೆ.
ಮೈಸೂರು ಮೂಲದ ನಟಿ ಭೂಮಿಕಾ ರಮೇಶ್, ಕನ್ನಡದ ಜನಪ್ರಿಯ ಧಾರಾವಾಹಿಯಾದ ‘ಲಕ್ಷ್ಮೀ ಬಾರಮ್ಮ’ನಲ್ಲಿ ನಾಯಕಿಯಾಗಿ ಲಕ್ಷ್ಮೀ ಪಾತ್ರದಲ್ಲಿ ಮಿಂಚಿದರು. ಈ ಧಾರಾವಾಹಿ ಕೆಲ ಕಾಲ TRP ಚಾರ್ಟ್‌ನ ಟಾಪ್‌ಲ್ಲಿ ನಿಂತಿತ್ತು.’ಲಕ್ಷ್ಮೀ ಬಾರಮ್ಮ’ ನಂತರ, ತೆಲುಗಿನ ‘ಮೇಘ ಸಂದೇಶಂ’ ಎಂಬ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
ಕುತೂಹಲಕರ ವಿಷಯ ಏನೇ ಅಂದ್ರೆ, ಭೂಮಿಕಾ ಇನ್ನು ಕಾಲೇಜು ವಿದ್ಯಾರ್ಥಿನಿ. BCA ಫೈನಲ್ ಇಯರ್ ಓದುತ್ತಿದ್ದಾರೆ. ಜೊತೆಗೆ, ಭರತನಾಟ್ಯದಲ್ಲಿ ‘ವಿದ್ವತ್’ ಕೂಡ ಮಾಡ್ತಾ ಇದ್ದಾರೆ. ಕಲಾ ಲೋಕ, ಅಧ್ಯಯನ, ಸೀರಿಯಲ್ಸ್ – ಎಲ್ಲವನ್ನೂ ಬ್ಯಾಲೆನ್ಸ್ ಮಾಡೋದು ಸುಲಭವಲ್ಲ. ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 12 ಶೀಘ್ರದಲ್ಲೇ ಬರುತ್ತಾ ಇದೆ. ಇವತ್ತು ನಾಳೆ ತಯಾರಿಗಳು ಜೋರಾಗಿ ನಡೆಯುತ್ತಿದೆ. ಈ ಬಾರಿಗೆ Innovative Film City-ಯಲ್ಲಿ ಹೊಸ ಮನೆ ನಿರ್ಮಾಣವಾಗಿದೆ ಅಂತ ತಿಳಿದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ‘ಸಂಭಾವ್ಯ’ ಪಟ್ಟಿ ವೈರಲ್ ಆಗ್ತಾ ಇದೆ. ಅದರಲ್ಲಿ ಯಾರೆಲ್ಲಾ ಇದ್ದಾರೆ ಅಂತ ನೋಡಿದ್ರೆ – ಭೂಮಿಕಾ ರಮೇಶ್ ಅವರ ಹೆಸರೂ ಕಾಣಿಸ್ತಾ ಇದೆ!
ಇದೀಗ ಎಲ್ಲರಿಗೂ ಒಂದೇ ಪ್ರಶ್ನೆ: ಭೂಮಿಕಾ ಬಿಗ್ ಬಾಸ್ ಮನೆಗೆ ಹೋಗ್ತಾರಾ? ಅನ್ನೋದು. ಇದಕ್ಕೆ ಖುದ್ದು ಭೂಮಿಕಾ ರಮೇಶ್ ಉತ್ತರ ಕೊಟ್ಟಿದ್ದಾರೆ. ಯೂಟ್ಯೂಬ್ ಚಾನೆಲ್‌ಗೆ ಕೊಟ್ಟ ಸಂದರ್ಶನದಲ್ಲಿ, ‘Bigg Boss’ ಗೆ ಹೋಗ್ತೀರಾ?’ ಎಂಬ ಪ್ರಶ್ನೆಗೆ simple ಆಗಿ ‘No comments’ ಅಂತ ಉತ್ತರಿಸಿದ್ದಾರೆ. ಅಷ್ಟೇ ಅಲ್ಲ, ‘Bigg Boss ಅಂದ್ರೆ ದೇವರು ಇದ್ದ ಹಾಗೆ… ಏನೂ predict ಮಾಡೋಕೆ ಆಗಲ್ಲ’ ಅಂತೂ ಸಹ ಹೇಳಿದ್ದಾರೆ.
ಆದರೆ, ಇನ್ನೊಂದು ಸ್ಟೇಟ್ಮೆಂಟ್‌ನಲ್ಲಿ ಭೂಮಿಕಾ ರಮೇಶ್ ಸರಳವಾಗಿ ಹೇಳಿದ್ದು, ಸದ್ಯಕ್ಕೆ ಬಿಗ್ ಬಾಸ್‌ಗೆ ಹೋಗೋ ಆಸಕ್ತಿ ಇಲ್ಲ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ